ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮೇ.30) : ಮಾರ್ಗರೇಟ್ ಲವರ್ ರಾಮಾಚಾರಿ ಚಿತ್ರದ ಎರಡನೆ ಹಂತದ ಚಿತ್ರೀಕರಣ ಹದಿನೈದು ದಿನಗಳ ಕಾಲ ಚಿತ್ರದುರ್ಗದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಗಿರಿಧರ್ ಕುಂಬಾರ್ ತಿಳಿಸಿದರು.
ದುರ್ಗದ ಸಿರಿ ಹೋಟೆಲ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದುರ್ಗದ ಕೋಟೆ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲಿ ಎರಡನೆ ಹಂತದ ಚಿತ್ರೀಕರಣ ನಡೆಯಲಿದೆ.
ಬೆಂಗಳೂರಿನಲ್ಲಿ ಮೂರನೆ ಹಂತದ ಶೂಟಿಂಗ್ ನಡೆಸಲಿದ್ದೇವೆ. ಸಮಾಜದಲ್ಲಿ ಹುಡುಗಿಯರನ್ನು ಯಾವ ರೀತಿ ಕಾಣಲಾಗುತ್ತಿದೆ. ಯಾವುದನ್ನು ಜಡ್ಜ್ ಮಾಡಬಾರದು ಎನ್ನುವುದು ಚಿತ್ರದ ತಿರುಳು ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಹರೀಶ್ ಮಾತನಾಡಿ ಇದೊಂದು ಫ್ರೆಂಡ್‍ಶಿಫ್ ಸ್ಟೋರಿ. ಚಿತ್ರದಲ್ಲಿ ಎಲ್ಲಾ ಹೊಸ ಮುಖಗಳಿವೆ. ಚಿತ್ರದುರ್ಗದ ಏಳುಸುತ್ತಿನ ಕೋಟೆಯನ್ನು ರಾಜ್ಯಕ್ಕೆ ಪರಿಚಯಿಸಬೇಕೆಂಬುದು ನಮ್ಮ ಉದ್ದೇಶ. ಕೋಟೆಯ ಬಗ್ಗೆ ನಮಗಂತೂ ಅಪಾರ ಅಭಿಮಾನವಿದೆ. ಮೇ.31 ರಿಂದ ಜೂ.20 ರವರೆಗೆ ಚಿತ್ರೀಕರಣ ನಡೆಯಲಿದೆ ಎಂದರು.
ನಟ ಅಭಿಲಾಷ್, ನೋನಲ್ ಮಾಂತೇರೋ, ಯಶ್‍ಶೆಟ್ಟಿ, ತಲ್ವಾರ್ ಸುಮನ್, ಜಹಾಂಗೀರ್, ಮನುಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.
ನಿಹಾಂತ್ ಪ್ರೊಡಕ್ಷನ್ಸ್‍ನ ಶ್ರೀಮತಿ ವನಿತಾ ಹೆಚ್.ಎನ್. ಹರೀಶ್‍ರವರ ನಿರ್ಮಾಣದ ಮಾರ್ಗರೇಟ್ ಲವೌರ್ ಆಫ್ ರಾಮಾಚಾರಿ ಚಿತ್ರದ ಎರಡನೆ ಹಂತದ ಚಿತ್ರೀಕರಣಕ್ಕೆ ಐತಿಹಾಸಿಕ ಚಿತ್ರದುರ್ಗದ ಕೋಟೆಯಲ್ಲಿರುವ ಏಕನಾಥೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಮಂಗಳವಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ವೀರೇಂದ್ರ ಕೋಗುಂಡೆ ಮಠರವರು ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣ ಯಶಸ್ವಿಯಾಗಲೆಂದು ಹಾರೈಸಿದರು.
ನಟ ಹಾಗೂ ಚಿತ್ರದ ನಿರ್ಮಾಪಕರು ಈ ಸಂದರ್ಭದಲ್ಲಿದ್ದರು.