Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

IPL 2023 : ರೋಚಕ ಪಂದ್ಯದಲ್ಲಿ ಗೆದ್ದು ಐದನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್

---Advertisement---

ಸುದ್ದಿಒನ್ ಡೆಸ್ಕ್

 

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2023 ರ ವಿಜೇತರಾಗಿ ಹೊರಹೊಮ್ಮಿದರು. ಬಹುತೇಕ ಸೋಲಿನ ಅಂಚಿನಲ್ಲಿದ್ದ ಚೆನ್ನೈ ತಂಡವನ್ನು ಅಂತಿಮವಾಗಿ ರವೀಂದ್ರ ಜಡೇಜಾ ಗೆಲುವಿನ ದಡ ಸೇರಿಸಿದರು.ಕೊನೆಯ ಓವರ್ ಬೌಲ್ ಮಾಡಿದ ಮೋಹಿತ್ ಶರ್ಮಾ ಮೊದಲ ನಾಲ್ಕು ಎಸೆತಗಳನ್ನು ಮಿತವಾಗಿ ಬೌಲ್ ಮಾಡಿದರಾದರೂ ಕೊನೆಯ ಎರಡು ಎಸೆತಗಳನ್ನು ಎಸೆಯುವ ವೇಳೆ ನಿಯಂತ್ರಣ ಕಳೆದುಕೊಂಡರು. ಇದರೊಂದಿಗೆ ಕೊನೆಯ ಎರಡು ಬಾಲ್ ಗಳಿಗೆ ಜಡೇಜಾ ಸತತ 6 ಮತ್ತು 4 ರನ್ ಗಳಿಸಿ ಚೆನ್ನೈಗೆ  ಐದನೇ ಬಾರಿಗೆ ಪ್ರಶಸ್ತಿ  ತಂದುಕೊಡುವಲ್ಲಿ ಯಶಸ್ವಿಯಾದರು.

 

ಮುಖ್ಯಾಂಶಗಳು:

• ಚೆನ್ನೈ ಐಪಿಎಲ್ 2023 ರ ವಿಜೇತ ತಂಡ

• ಕೊನೆಯ ಓವರ್‌ನಲ್ಲಿ  ಮ್ಯಾಜಿಕ್ ಮಾಡಿದ ಜಡೇಜಾ

• ಮಳೆಯಿಂದಾಗಿ ಪಂದ್ಯವನ್ನು 15 ಓವರ್‌ಗಳಿಗೆ ಮೊಟಕು.

• ಚೆನ್ನೈ ಐದನೇ ಬಾರಿಗೆ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2023 ರ ವಿಜೇತರಾದರು. ಐಪಿಎಲ್ 2023 ರ ಫೈನಲ್ ಪಂದ್ಯದಲ್ಲಿ ಸೋಮವಾರ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್‌ಗಳಿಂದ ಜಯಗಳಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 214 ರನ್ ಗಳಿಸಿತು.ಚೆನ್ನೈ ತಂಡ ಕೊನೆಯ ಎಸೆತದಲ್ಲಿ ಐದು ವಿಕೆಟ್ ನಷ್ಟಕ್ಕೆ 171 ರನ್‌ಗಳ ಗುರಿಯನ್ನು ತಲುಪಿತು. ಚೆನ್ನೈ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ಕೊನೆಯ ಓವರ್ ಬೌಲ್ ಮಾಡಿದ ಮೋಹಿತ್ ಶರ್ಮಾ ಮೊದಲ 4 ಎಸೆತಗಳಲ್ಲಿ ಕೇವಲ ಮೂರು ರನ್‌ಗಳನ್ನು ನೀಡಿ ಪಂದ್ಯದ ರೋಚಕತೆಯನ್ನು ತುತ್ತ ತುದಿಗೆ ಕೊಂಡೊಯ್ದರು. ಆದರೆ ಕೊನೆಯ ಎರಡು ಬಾಲ್ ಗಳಲ್ಲಿ ರವೀಂದ್ರ ಜಡೇಜಾ ಅವರು ಕ್ರಮವಾಗಿ 6 ಮತ್ತು 4 ರನ್ ಪಡೆಯುವ ಮೂಲಕ ಪಂದ್ಯದ ಚಿತ್ರಣವೇ ಬದಲಾಗಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಈ ಪಂದ್ಯವನ್ನು ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದುವರೆಗೆ ಮುಂಬೈ ಇಂಡಿಯನ್ಸ್ ಮಾತ್ರ ಐದು ಬಾರಿ ಪ್ರಶಸ್ತಿ ಗೆದ್ದಿದೆ. ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಸತತ ಎರಡನೇ ಬಾರಿಗೆ ಫೈನಲ್ ತಲುಪಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...