ಬೆಂಗಳೂರು: ಇಂದು ಕಾಂಗ್ರೆಸ್ ಸರ್ಕಾರದ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಸಾಕಷ್ಟು ಆಕಾಂಕ್ಷಿಗಳಿದ್ದರು. ಆದರೆ ಹೈಕಮಾಂಡ್ ಒಂದಷ್ಟು ಶಾಸಕರಿಗೆ ಕೊಕ್ ನೀಡಿದ್ದು, 24 ಶಾಸಕರನ್ನು ಫೈನಲ್ ಮಾಡಿದೆ. ಆದ್ರೆ ಸಚಿವ ಸ್ಥಾನ ಸಿಗದ ಹಿನ್ನಲೆ ಅಸಾಮಾಧಾನದ ಜೊತೆಗೆ ಪ್ರತಿಭಟನೆಗಳು ಕೂಡ ನಡೆಯುತ್ತಿದೆ.
ಇಂದು ರಾಜಭವನದ ಎದುರು ಶಾಸಕ ಪ್ರಿಯಾ ಕೃಷ್ಣ ಹಾಗೂ ಎಂ ಕೃಷ್ಣಪ್ಪ ಬೆಂಬಲಿಗರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ತಂದೆ – ಮಗನ ಹೆಸರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಿರುವುದಕ್ಕೆ ಕಾಂಗ್ರೆಸ್ ಮೇಲೆ ಅಸಮಾಧಾನ ಹೊರ ಹಾಕಿರುವ ಬೆಂಬಲಿಗರು, ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಡೆ ನೋವುಂಟು ಮಾಡಿದೆ ಎಂದು ಬೆಂಬಲಿಗರು ಬೇಸರ ಹೊರ ಹಾಕಿದ್ದಾರೆ. ಪ್ರಿಯಕೃಷ್ಣ ಹಾಗೂ ಎಂ ಕೃಷ್ಣಪ್ಪ ಅವರ ಫೋಟೋಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಘೋಷಣೆಗಳನ್ನು ಕೂಗಿದ್ದಾರೆ. ಅತ್ತ ರಾಜಭವನದ ಒಳಗಡೆ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತಿದೆ. ಇದರ ನಡುವೆ ಹೊರಗೆ ಪ್ರತಿಭಟನೆ ನಡೆಯುತ್ತಿದೆ. ಹೈಕಮಾಂಡ್ ಫೈನಲ್ ಮಾಡಿದ ಪಟ್ಟಿಯಂತೆಯೇ ಇವತ್ತು 24 ಶಾಸಕರಾಗಿ ಸಚಿವ ಸ್ಥಾನ ಸ್ವೀಕಾರ ಮಾಡಲಿದ್ದಾರೆ.