Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರತಿ ಮೂರು ತಿಂಗಳಿಗೊಮ್ಮೆ  ಆರೋಗ್ಯವನ್ನು ತಪಾಸಣೆ ಅಗತ್ಯ : ಗಾಯತ್ರಿ ಶಿವರಾಂ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮೇ.26) :  ಖಾಯಿಲೆ ಬಂದಾಗ ಚಿಕಿತ್ಸೆಯನ್ನು ಪಡೆಯುವುದಕ್ಕಿಂತ ಬಾರದ ರೀತಿಯಲ್ಲಿ ನೋಡಿಕೊಳ್ಳುವುದು ಉತ್ತಮ ಎಂದು ರೋಟರಿಕ್ಲಬ್‍ನ ಅಸಿಸ್ಟೆಂಟ್ ಗೌರ್ನರ್ ಗಾಯತ್ರಿ ಶಿವರಾಂ ತಿಳಿಸಿದರು.

ಚಿತ್ರದುರ್ಗ ರೋಟರಿ ಕ್ಲಬ್ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿಬಾಲಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಕಾಲದಲ್ಲಿ ವ್ಯಾಯಾಮ ಎನ್ನುವುದು ಕಡಿಮೆಯಾಗಿದೆ ಮಾನವ ಎಲ್ಲದಕ್ಕೂ ಸಹಾ ಯಂತ್ರಗಳನ್ನು ಅವಲಂಬಿಸಿದ್ದಾನೆ. ಇದರಿಂದ ದೇಹದಲ್ಲಿ ಶಕ್ತಿ ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ, ಮಾನವ 40 ದಾಟಿದ ಮೇಲೆ ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಆರೋಗ್ಯವನ್ನು ತಪಾಸಣೆಯನ್ನು ಮಾಡಿಸಬೇಕು ಎಂದು ಕರೆ ನೀಡಿದರು.

ರೋಟರಿ ಕ್ಲಬ್‍ವತಿಯಿಂದ ಈ ರೀತಿಯ ವಿವಿಧ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನತೆಯ ಆರೋಗ್ಯವನ್ನು ಕಾಪಾಡಲಾಗುತ್ತದೆ, ಇದರೊಂದಿಗೆ ಶಾಲಾ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಸಾಮಾಗ್ರಿಗಳನ್ನು ನೀಡುವುದರೊಂದಿಗೆ ಅವರ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಅಪೌಷ್ಟಿಕತೆಯ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕತೆಯನ್ನು ನೀಡುವ ವಿವಿಧ ರೀತಿಯ ವಸ್ತುಗಳನ್ನು ನೀಡುವುದರೊಂದಿಗೆ ದೇಶಕ್ಕೆ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾ. ನಿಷಾನ್ ಮಾತನಾಡಿ, ಇಲ್ಲಿ ಉಚಿತವಾಗಿ ತಪಾಸಣೆಯನ್ನು ನಡೆಸಲಾಗುತ್ತದೆ ಅಗತ್ಯ ಇದ್ದವರಿಗೆ ನಮ್ಮ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಗುತ್ತದೆ. ಯಾವುದೇ ರೀತಿಯಿಂದಲೂ ಹೆದರು ಅಗತ್ಯ ಇಲ್ಲ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದಲ್ಲಿ ಆರೋಗ್ಯವಂತಾಗಿರಬಹುದಾಗಿದೆ ಎಂದು ತಿಳಿಸಿದರು.

ಈ ಶಿಬಿರದಲ್ಲಿ ಹೃದಯರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲು ಕಾಯಿಲೆಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಗಿದ್ದು, ಇದರ ಜೊತೆಯಲ್ಲಿ ಉಚಿತವಾಗಿ ಇಸಿಜಿ,/2ಡಿ, ಎಕೋ ಸ್ಕ್ಯಾನಿಂಗ್ ಮಾಡಲಾಯಿತು. ಸಪ್ತಗಿರಿ ಆಸ್ಪತ್ರೆಯ ವೈದ್ಯರುಗಳಾದ ಡಾ.ಹನುಮಂತಯ್ಯ, ಡಾ.ಅರುಣ್,ಡಾ ಸುಶ್ಮೀತಾ, ಡಾ.ಇಂದು ಶಿಬಿರದ ಸಂಚಾಲಕರಾದ ರಾಘವೇಂದ್ರ ಭಾಗವಹಿಸಿದ್ದರು.

ರೋಟರಿ ಕ್ಲಬ್‍ನ ನಿಯೋಜಿತ ಅಧ್ಯಕ್ಷರಾದ ಕನಕರಾಜು, ರೋಟರಿ ಕ್ಲಬ್‍ನ ಕಾರ್ಯದರ್ಶಿ ರೋ. ಜಯಶ್ರೀ ಷಾ. ರೋ.ವಿಕ್ರಾಂತ್ ಜೈನ್, ವೀರಭದ್ರಸ್ವಾಮಿ, ಎಸ್.ವೀರೇಶ್, ಶಿವರಾಂ, ತರುಣಾ ಷಾ, ಚಂದ್ರಮೋಹನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು 200 ಜನ ತಮ್ಮ ಆರೋಗ್ಯವನ್ನು ತಪಾಸಣೆಯನ್ನು ಮಾಡಿಸಿಕೊಂಡರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!