ಪಕ್ಷ ಸಂಘಟನೆ ಮಾಡುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಾಕಷ್ಟು ಶ್ರಮ ಹಾಕಿದ್ದರು. ಹೀಗಾಗಿಯೇ ಸಿಎಂ ಸ್ಥಾನ ಬೇಕೇ ಬೇಕು ಎಂದು ಹಠ ಮಾಡಿದ್ದರು. ಆದ್ರೆ ಹೈಕಮಾಂಡ್ ಸಂಧಾನದ ಮೇರೆಗೆ ಡಿಕೆ ಶಿವಕುಮಾರ್ ಡಿಸಿಎಂ ಆಗುವುದಕ್ಕೆ ಒಪ್ಪಿಕೊಂಡರು. ಇದೀಗ ಅವರು ಸಿಎಂ ಆಗುತ್ತಾರಾ..? ಇಲ್ವಾ ಎಂಬ ಭವಿಷ್ಯವನ್ನು ಅವರ ಆತ್ಮೀಯ ಜ್ಯೋತಿಷಿಯೇ ನುಡಿದಿದ್ದಾರೆ.
ಡಿಕೆಶಿ ಅವರ ಆಪ್ತ ಜ್ಯೋತಿಷಿ, ಡಾ. ಬಿಪಿ ಆರಾಧ್ಯ ಅವರು ಹೇಳಿದ ಪ್ರಕಾರ, ಡಿಕೆ ಶಿವಕುಮಾರ್ ಅವರಿಗೆ ಸದ್ಯಕ್ಕೆ ಗುರುಬಲ ಸರಿ ಇಲ್ಲ. ಎರಡು ವರ್ಷ ಕಳೆದ ಮೇಲೆ ಗುರು ಬಲ ಬರುತ್ತೆ. ಎರಡು ವರ್ಷಗಳ ಬಳಿಕ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ. ಅದಾದ ಬಳಿಕವೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಆಗಲೂ ಡಿಕೆ ಶಿವಕುಮಾರ್ ಅವರೇ ಸಿಎಂ ಆಗುತ್ತಾರೆ.
ಯಾರು ಏನೇ ಹೇಳಿದರೂ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ತಪ್ಪಿಸಲು ಸಾಧ್ಯವಿಲ್ಲ. ಕೆಲವರು ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎಂದು ಹೇಳುತ್ತಾರೆ. ಆದರೆ ಹೈಕಮಾಂಡ್ ಮಟ್ಟದಲ್ಲಿ ಬೇರೆಯದ್ದೇ ತೀರ್ಮಾನ ಮಾಡಿದ್ದಾರೆ ಎಂದಿದ್ದಾರೆ.