ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದೆ. ಅದರಲ್ಲೂ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಎಲ್ಲೆಲ್ಲಿ ಅಧಿಕಾರವನ್ನು ಕಳೆದುಕೊಂಡಿದೆಯೋ ಅಲ್ಲೆಲ್ಲಾ ಮತ್ತೆ ಪುಟಿದೇಳಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.
ಮಧ್ಯಪ್ರದೇಶದಲ್ಲಿ ಗೆಲುವನ್ನು ಪಡೆಯಲು ಕಾಂಗ್ರೆಸ್ ಪಕ್ಷ ಕರ್ನಾಟಕದ ಫಾರ್ಮುಲಾದಂತೆಯೇ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. 2024ರ ಲೋಕಸಭಾ ಚುನಾವಣೆಯಲ್ಲೂ ಕಣ್ಣಿಟ್ಟಿರುವ ಕಾಂಗ್ರೆಸ್, ಹೊಸ ಉತ್ಸಾಹದೊಂದಿಗೆ ಮುನ್ನುಗ್ಗುತ್ತಿದೆ. ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಅದನ್ನೇ ಅನುಸರಿಸಲು ಹೊರಟಿದ್ದಾರೆ.
ಸದ್ಯಕ್ಕೆ ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಏರಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿದೆ. ಆ ಐದು ಗ್ಯಾರಂಟಿಗಳಲ್ಲಿ ಅಲ್ಲಿನ ಜನಕ್ಕೆ ಏನು ಬೇಕಾಗಿದೆ ಎಂಬುದು ಅರಿತು ಅನೌನ್ಸ್ ಮಾಡಲಾಗಿದೆ.
1. ಗ್ಯಾಸ್ ಸಿಲಿಂಡರ್ 500
2. ಗೃಹಿಣಿಯರಿಗೆ 1500
3. ಕೃಷಿ ಸಾಲ ಮನ್ನಾ
4. 100 ಯೂನಿಟ್ ಫ್ರೀ
5. ಹಳೆಯ ಪಿಂಚಣಿ ಯೋಜನೆ ಜಾರಿ