ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ : ಡಾ.ಶ್ರೀ.ಶಾಂತವೀರ ಸ್ವಾಮೀಜಿ

suddionenews
1 Min Read

 

ಚಿತ್ರದುರ್ಗ, (ಮೇ.22) : ಅನುಭವ, ಅರ್ಹತೆ, ಪಕ್ಕನಿಷ್ಠೆ, ಕಾನೂನಿನ ಅರಿವು ಇರುವ ಚಯಚಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಿಗೆ ಮನವಿ ಮಾಡುತ್ತೇವೆ
ಎಂದು ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ಶಾಂತವೀರ ಮಹಾಸ್ವಾಮೀಜಿರವರು ಒತ್ತಾಯಿಸಿದ್ದಾರೆ.

7 ಬಾರಿ ಶಾಸಕರಾಗಿ, ಅನೇಕ ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಸರ್ಕಾರ ಮತ್ತು ಪಕ್ಷಕ್ಕೆ ಘನತೆ ಗೌರವ ತರುವ ಉತ್ತಮ ವಾಗ್ಮಿಯಾದ ನೀರಾವರಿ ಇಲಾಖೆಯ ಬಗೆಗಿನ ಅವರ ಅಸಕ್ತಿ ಅಧ್ಯಯನ ಇರುವ ಇವರನ್ನು ಸಚಿವರಾಗಿ ಮಾಡಿದರೆ ಉತ್ತಮ ಹಾಗೂ ಸಮಾಜಿಕ ನ್ಯಾಯ ಒದಗಿಸದಂತೆ ಅಗುತ್ತದೆ. ಕುಂಚಿಟಿಗ ಸಮಾಜದ ಏಕೈಕ ಶಾಸಕ ಚಯಚಂದ್ರ ರವರನ್ನು ಸಮಾಜ ಬೆಂಬಲಿಸುತ್ತದೆ. 12 ಜಿಲ್ಲೆಯಲ್ಲಿರುವ ಅದರಲ್ಲೂ 4 ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕುಂಚಿಟಿಗ ಸಮಾಜಕ್ಕೆ ಅನ್ಯಾಯ ಮಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *