ಇವತ್ತು RCB ಮ್ಯಾಚ್ ನಡೆಯುತ್ತಾ..? ನಡೆಯಲ್ವಾ..?

suddionenews
1 Min Read

ಬೆಂಗಳೂರು: ಇಂದು ಆರ್ಸಿಬಿ ಅಭಿಮಾನಿಗಳಿಗೆ ಮಹತ್ವದ ದಿನವಾಗಿದೆ. ಯಾಕಂದ್ರೆ ಆರ್ಸಿಬಿ ಪ್ಲೇ ಆಫ್ ಗೆ ಹೋಗುವ ಕನಸು ಇಂದು ತಿಳಿಯುತ್ತಿತ್ತು. ಗುಜರಾತ್ ಟೈಟಾನ್ಸ್ ಜೊತೆ ಇಂದು ಆರ್ಸಿಬಿ ಸೆಣಸಾಡಲಿತ್ತು. ಆದ್ರೆ ಇವತ್ತಿನ ಬೆಂಗಳೂರಿನ ವಾತಾವರಣ‌ ನೋಡುತ್ತಾ ಇದ್ದರೆ ಅದ್ಯಾಕೋ ಡೌಟು ಎನ್ನಲಾಗ್ತಿದೆ.

ಇಂದು ರಾಜ್ಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದೆ. ಎಲ್ಲೆಲ್ಲೂ ಮಳೆಯಾಗಿದೆ. ಬೆಂಗಳೂರಿನಲ್ಲಂತೂ ಮಳೆಯಿಂದಾಗಿ ಕೆಲವು ಕಡೆ ರಸ್ತೆಯೆಲ್ಲಾ ಜಲಾವೃತವಾಗಿದೆ. ವಾಹನಗಳು ಜಖಂ ಆಗಿದೆ. ಕೆಲ ಅಂಡರ್ ಪಾಸ್ ಗಳಲ್ಲಿ ನೀರು ನಿಂತು ಜನ ಪರದಾಡುವಂತೆ ಆಗಿದೆ.

ಇನ್ನು ಇವತ್ತಿನ ಮ್ಯಾಚ್ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿಯೇ ನಡೆಯಬೇಕಿದೆ. ಮಳೆಯಿಂದಾಗಿ ಕಂಠೋರವ ಸ್ಟೇಡಿಯಂ ಗೂ ನೀರು ತುಂಬಿಕೊಂಡಿದೆ. ಹೀಗಾಗಿ ಇವತ್ತಿನ ಹೈವೋಲ್ಟೇಜ್ ಮ್ಯಾಚ್ ಅನುಮಾನ ಎನ್ನಲಾಗುತ್ತಿದೆ. ಮ್ಯಾಚ್ ನಡೆಯದೆ ಹೋದಲ್ಲಿ ಆರ್ಸಿಬಿ ಒಂದು ಪಾಯಿಂಟ್ ಏನೋ ಸಿಗುತ್ತೆ. ಆದ್ರೆ ಪ್ಲೇ ಆಫ್ ಗೆ ಹೋಗಬೇಕು ಅಂದ್ರೆ ಮುಂಬೈ ಈಗ ಸೋಲಲೇಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks