Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಾಸನ ಟಿಕೆಟ್ ಮಿಸ್ ಆದ್ರೂ ಜೆಡಿಎಸ್ ನ ದೊಡ್ಡ ಹುದ್ದೆ ಭವಾನಿ ರೇವಣ್ಣ ಪಾಲಿಗೆ ಸಿಗಲಿದೆಯಾ..?

Facebook
Twitter
Telegram
WhatsApp

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರವನ್ನು ಸ್ಥಾಪಿಸಿದೆ. ಆದ್ರೆ ಜೆಡಿಎಸ್ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಅದೆಲ್ಲವೂ ಉಲ್ಟಾ ಆಗಿದೆ‌. ಅದರಲ್ಲೂ ಜೆಡಿಎಸ್ ನ ಭದ್ರಕೋಟೆಗಳಲ್ಲಿಯೇ ಪಕ್ಷ ಮುಗ್ಗರಿಸಿದೆ. ಹಳೇ ಮೈಸೂರು ಭಾಗದಲ್ಲಿ ತಮ್ಮ ಮತಗಳನ್ನು ಕಳೆದುಕೊಂಡಿರುವುದು ಜೆಡಿಎಸ್ ಗೆ ನುಂಗಲಾರದ ತುತ್ತಾಗಿದೆ.

ಸೋಲಿನ ಬಳಿಕ ಪರಾಮರ್ಶೆಯನ್ನೇನೋ ಮಾಡಿಕೊಂಡಿದ್ದಾಗಿದೆ. ಆದ್ರೆ ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ನ ಮತ್ತೆ ಮುನ್ನಲೆಗೆ ತರಬೇಕೆಂಬುದು ದಳಪತಿಗಳ ನಿರ್ಧಾರವಾಗಿದೆ. ಹೀಗಾಗಿಯೇ ಒಂದು ಮಹತ್ವದ ಬದಲಾವಣೆಗೆ ಮುನ್ನುಡಿ ಬರೆಯಲು ಮುಂದಾಗಿದ್ದಾರೆ. ಅದುವೇ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ.

ಸಿ ಎಂ ಇಬ್ರಾಹಿಂ ಅವರನ್ನು ಆ ಸ್ಥಾನದಲ್ಲಿ ಕೂರಿಸುವುದರಿಂದ ಮುಸ್ಲಿಂ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಚಾರ ಇತ್ತು. ಈಗ ಅದು ಫೇಲ್ ಆಗಿರುವ ಕಾರಣ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭವಾನಿ ರೇವಣ್ಣ ಅವರನ್ನು ನೇಮಕ ಮಾಡಲು ಯೋಚನೆ ಮಾಡಲಾಗಿದೆ ಎನ್ನಲಾಗಿದೆ. ಯಾಕಮನದ್ರೆ ಭವಾನಿ ರೇವಣ್ಣ ಅವರಿಗೆ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯವಿದೆ. ಒಗ್ಗೂಡಿಸಿಕೊಂಡು ಹೋಗುವ ಮನೋಬಲವೂ ಇದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಈ ಬಾರಿ ಟಿಕೆಟ್ ಗಾಗಿ ಒದ್ದಾಡಿದಾಗಲೂ ಟಿಕೆಟ್ ಸಿಗದೆ ಇದ್ದಾಗ, ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ, ಗೆಲ್ಲುವುದಕ್ಕೆ ನೆರವು ಮಾಡಿಕೊಟ್ಟರು. ಹೀಗಾಗಿ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಯಾಗುತ್ತೆ ಎಂಬ ನಂಬಿಕೆಯಿಂದ ಅವರ ಹೆಸರೇ ಮುನ್ನಲೆಯಲ್ಲಿದೆ. ಈಗ ದೇವೇಗೌಡರ ಒಪ್ಪಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕ ಎಸ್. ಶಿವಕುಮಾರ್ ನಿಧನ

    ಸುದ್ದಿಒನ್, ಚಳ್ಳಕೆರೆ, ಮೇ. 07 : ತಾಲ್ಲೂಕಿನ ತಿಮ್ಮಣ್ಣನಹಳ್ಳಿಯ  ಸಿ.ಪಿ. ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ (55 ವರ್ಷ) ಅವರು ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ

ಹಲ್ಲುಜ್ಜದೇ ನೀರು ಕುಡಿತೀರಾ..? ಡೋಂಟ್ ವರಿ ಅದರಿಂದಾನೂ ಆರೋಗ್ಯ ಲಾಭಗಳಿವೆ

ಸುದ್ದಿಒನ್ : ಅನೇಕ ಜನರು ಬೆಳಿಗ್ಗೆ ಹಲ್ಲುಜ್ಜಿದ ನಂತರವೇ ಏನನ್ನಾದರೂ ತಿನ್ನಲು ಅಥವಾ ಕುಡಿಯಲು ಬಯಸುತ್ತಾರೆ. ಹಲ್ಲುಜ್ಜದೆ ನೀರು ಕುಡಿಯುವುದು ಉತ್ತಮವೇ ? ವೈದ್ಯರ ಪ್ರಕಾರ ಒಬ್ಬ ವ್ಯಕ್ತಿಯು ಆರೋಗ್ಯವಾಗಿರಲು ದಿನಕ್ಕೆ 8 ರಿಂದ

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು.

ಇಂದಿನ ರಾಶಿ ಫಲ. ಈ ರಾಶಿಗಳ ಮದುವೆ, ಸಂತಾನ ವಿಳಂಬವೇಕೆ? ಇಷ್ಟರಾರ್ಜಿತ ಕೆಲಸ ಕಾರ್ಯಗಳು ಏಕೆ ನೆರವೇರುತ್ತಿಲ್ಲ? ಸೂಕ್ತ ಮಾಹಿತಿ ನೀಡಲಾಗುವುದು. ಮಂಗಳವಾರ ರಾಶಿ ಭವಿಷ್ಯ -ಮೇ-7,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34

error: Content is protected !!