ಸುದ್ದಿಒನ್, ಚಿತ್ರದುರ್ಗ, (ಅ.14) : ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಶೂನ್ಯ ಪೀಠಾಧ್ಯಕ್ಷ ಹಾಗೂ ತ್ರಿವಿಧ ದಾಸೋಹಿಗಳಾದ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರ 30ನೇ ವರ್ಷದ ಪೀಠಾರೋಹಣ ತೃತೀಯ ದಶಮಾನೋತ್ಸವದ ಪ್ರಯುಕ್ತ ಚಿತ್ರದುರ್ಗದ ಪಿ.ಎಲ್. ನಾಗೇಂದ್ರ ರೆಡ್ಡಿ ಸಾರಥ್ಯದ ನಂ. 1 ಆನ್ಲೈನ್ ನ್ಯೂಸ್ ಪೋರ್ಟಲ್ ಸುದ್ದಿಒನ್ ಹೊರ ತಂದಿರುವ ಶತಮಾನದ ಸಂತ ವಿಶೇಷ ಸಂಚಿಕೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಲೋಕಾರ್ಪಣೆಗೊಳಿಸಿದರು.
ಶರಣ ಸಂಸ್ಕೃತಿ ಉತ್ಸವಯ ಯುವ ಸಮ್ಮೇಳನದಲ್ಲಿ
ಬಳಿಕ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ಸುದ್ದಿಓನ್ ಆನ್ಲೈನ್ ನ್ಯೂಸ್ ಪೋರ್ಟಲ್ ಹೆಚ್ಚು ಹೆಚ್ಚು ಸಾಮಾಜಿಕ ಮುಖಿ, ಜನಪರ ಸುದ್ದಿಗಳನ್ನು ನೀಡಲಿ ಎಂದು ಹಾರೈಸಿದರು.
ಮುರುಘಾ ಶರಣರ ನೇತೃತ್ವದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಸಾಮಾಹಿಕ ವಿವಾಹಗಳು, ಅಂಗವಿಕಲರಿಗೆ ಮದುವೆಯಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಪರರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಲಕ ಮುರುಘಾ ಶರಣರು ಸಾವಿರಾರು ಜೀವಗಳನ್ನು ಉಳಿಸಿದ್ದು, ಒಂದು ಅದ್ಭುತ ಕಾರ್ಯವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜೀವನ ಜಗತ್ತಿನ ಯುವಸಮೂಹಕ್ಕೆ ಸ್ಪೂರ್ತಿಯಾಗಿದ್ದು, ಜಗತ್ತಿಗೆ ಭಾರತ ಸಂಸ್ಕೃತಿ ಸಾರಿದ್ದಾರೆ. ಆದರೆ. ಪ್ರಸ್ತುತ ಅತಿಯಾದ ತಂತ್ರಜ್ಞಾನ ಸೆಳೆತದಲ್ಲಿ ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ ಎಂದು ವಿಷಾದದಿಸಿದರು.
ಇಂದು ವಿಶ್ವದಲ್ಲಿ ಭಾರತ ಒಂದು ಶಕ್ತಿಶಾಲಿ, ಸ್ವಾವಲಂಬಿ ರಾಷ್ಟ್ರವಾಗಿ ನಿಂತಿದೆ. ಇದರ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶ್ರಮ ಅಪಾರವಾಗಿದೆ. ನಮ್ಮ ದೇಶ ಮತ್ತಷ್ಟು ಬಲವಾಗುವುದು ಯುವಜನತೆ ಮೇಲೆ ನಿಂತಿದ್ದು, ಇದರತ್ತ ಯುವಸಮೂಹ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಖನಿಜ ನಿಗಮದ ಆಧ್ಯಕ್ಷರಾದ ಶ್ರೀ ಎಸ್.ಲಿಂಗಮೂರ್ತಿ ಮಾತನಾಡಿ, ಈ ಯುವ ಮೇಳದಲ್ಲಿ ಶ್ರೀಗಳೇ ಉತ್ಸಾಹದಿಂದ ಚಟುವಟಿಕೆವುಳ್ಳವರಾಗಿ ಯುವಕರಂತೆ ಕಾಣುತ್ತಿದ್ದಾರೆ. ಅವರ ಕಾರ್ಯಗಳು ಇಡೀ ರಾಜ್ಯದಲ್ಲಿ ಅದ್ವೀತಿಯವಾಗಿದೆ. ಎಲ್ಲ ಜಾತಿಗಳಿಗೂ ಮಠವನ್ನು ನೀಡುವ ಮೂಲಕ ಜಾತಿರಹಿತ ಸಮಾಜದ ಸ್ಥಾಪನೆಗೆ ಮುಂದಾಗಿದ್ದಾರೆ. ವಿದ್ಯಾಪೀಠದ ಮೂಲಕ ಶಿಕ್ಷಣ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಬರದ ನಾಡಿಗೆ ಜ್ಞಾನದ ದಾಸೋಹ ನೀಡಿ ನಮ್ಮಲ್ಲಿ ಸ್ಥೈರ್ಯ ತುಂಬಿದ್ದಾರೆ. ಬಸವಣ್ಣನವರ ಬಹು ಎತ್ತರದ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವುದು ಶ್ರೀಗಳ ಸಾಧನೆಯೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವೈಟ್ ಪೆಟಲ್ಸ್ ಶ್ರೀ ಸೋಮಯ್ಯ ಹಾಗು ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕøತರಾದ ಚಿತ್ರದುರ್ಗ ಗೃಹರಕ್ಷಕ ದಳದ ಶ್ರೀ ಸಿ.ಎನ್.ಕಾಂತರಾಜುರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವದ ಗೌರವಾಧ್ಯಕ್ಷರಾದ ಶ್ರೀ.ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶರಣ ಸಂಸ್ಕøತಿ ಉತ್ಸವದ ಕಾರ್ಯಧ್ಯಕ್ಷರಾದ ಕೆ.ಎನ್.ನವೀನ್, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿಗಳಾದ ಎ.ಜೆ.ಪರಮಶಿವಯ್ಯ, ಹರಚರಗುರುಮೂರ್ತಿಗಳು, ವರ್ತಕರಾದ ಶ್ರೀ ಸಿ.ಶಂಕರಮೂರ್ತಿ, ಶ್ರೀ ಪಟೇಲ್ ಶಿವಕುಮಾರ್ , ಸಿದ್ದಾಪುರದ ಎಸ್.ವಿ.ನಾಗರಾಜಪ್ಪ, ಸಂಸ್ಕ್ರøತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಮಲ್ಲೇಪುರಂ ಜಿ.ವೆಂಕಟೇಶ್, ಕೆ.ಐ.ಎ.ಡಿ.ಬಿ. ಅಧ್ಯಕ್ಷರಾದ ಶ್ರೀ ರುದ್ರೇಶ್, ವೀರಮಂಗಲ್ ರಾಮೇಗೌಡ, ಬೀದರ್ ಉಪವಿಭಾಗಾಧಿಕಾರಿ ಶ್ರೀಮತಿ ಕೀರ್ತನಾ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಚಳ್ಳಕೆರೆಯ ಶಾಸಕರಾದ ಎಸ್.ರಘುಮೂರ್ತಿ, ಹನುಮಲಿ ಷಣ್ಮುಖಪ್ಪ, ಕಾಂಗ್ರೆಸ್ ಅಂಸಘಟಿತರ ರಾಜ್ಯಾಧ್ಯಕ್ಷರಾದ ಶ್ರೀ ಜಿ.ಎಸ್.ಮಂಜುನಾಥ್, ಮಹಮ್ಮದ್ ಪಾಷ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಎಸ್.ಜೆ.ಎಂ.ಪತ್ತಿನ ಸಹಕಾರ ಆಡಳಿತ ಮಂಡಳಿಯವರು ಶ್ರೀಗಳಿಗೆ ತೃತೀಯ ದಶಮಾನೋತ್ಸವದ ಪ್ರಯುಕ್ತ ಗೌರವಾರ್ಪಣೆ ಮಾಡಿದರು.