ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ನಾಳೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ನೂತನ ಸರ್ಕಾರ ರಚನೆಗೆ ಕಂಠೀರವ ಸ್ಟೇಡಿಯಂನಲ್ಲಿ ಈಗಾಗಲೇ ಎಲ್ಲಾ ತಯಾರಿಯೂ ಆಗುತ್ತಿದೆ. ಸಿಎಂ ಹುದ್ದೆಗೆ ಇದ್ದಂತಹ ರಿಸ್ಕ್ ಏನೋ ಹೈಕಮಾಂಡ್ ಗೆ ಕಳೀತು. ಆದ್ರೆ ಈಗ ಸಚಿವ ಸಂಪುಟ್ ಸೇರ್ಪಡೆ ತಲೆನೋವು ಶುರುವಾಗಿದೆ.

ಡಿಸಿಎಂ ಹುದ್ದೆಗ ಹಾಗೂ ಸಚಿವ ಸ್ಥಾನಕ್ಕೂ ಆಕಾಂಕ್ಷಿಗಳ ಪಟ್ಟಿ ಏನು ಕಡಿಮೆ ಇಲ್ಲ. ಹೀಗಾಗಿ ಹೈಕಮಾಂಡ್ ತುಂಬಾ ಯೋಚನೆ ಮಾಡಿ ನಿರ್ಧಾರಕ್ಕೆ ಬರಬೇಕಿದೆ. ನಾಳೆ ಪ್ರಮಾಣ ವಚನ ಕಾರ್ಯಕ್ರಮವಿದ್ದು, ಹೊಸ ಸರ್ಕಾರ ರಚನೆ ಮಾಡುವಲ್ಲಿ ಕಾಂಗ್ರೆಸ್ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರದ ಜೊತೆಗೆ ಹತ್ತು ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಎರಡು ಹಂತದಲ್ಲಿ ಸಂಪುಟಕ್ಕೆ ಸಚಿವರ ಆಯ್ಕೆ ಮಾಡಲು ಕ್ಷ ತೀರ್ಮಾನಿಸಿದೆ. ಎರಡನೇ ಹಂತದಲ್ಲಿ ಪೂರ್ತಿ ಸಚಿವರ ಸಂಪುಟ ರಚನೆಯಾಗಲಿದೆ. ಇನ್ನು ಸಂಭಾವ್ಯರ ಪಟ್ಟಿ ಇಲ್ಲಿದೆ. ಜಾತಿವಾರು ಲೆಕ್ಕಚಾರದಲ್ಲಿ ಕಾಂಗ್ರೆಸ್ ಸಂಪುಟ ರಚನೆ ಮಾಡಲಿದೆ. ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ಆರ್.ವಿ. ದೇಶಪಾಂಡೆ, ಯು.ಟಿ. ಖಾದರ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ. ಜಾರ್ಜ್, ಎಚ್.ಸಿ. ಮಹದೇವಪ್ಪ, ಲಕ್ಷ್ಮಣ ಸವದಿ, ಶಿವಲಿಂಗೇಗೌಡ, ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ವೈ, ಮೇಟಿ, ಅಬ್ಬಯ್ಯ ಪ್ರಸಾದ್, ನಾಗೇಂದ್ರ, ಎಸ್.ಎಸ್. ಮಲ್ಲಿಕಾರ್ಜುನ್, ಕೊತ್ತೂರು ಮಂಜುನಾಥ್, ನರೇಂದ್ರ ಸ್ವಾಮಿ, ಆರ್ ವಿ ತಿಮ್ಮಾಪುರ, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ತನ್ವೀರ್ ಸೇಠ್, ಅಜಯ್ ಸಿಂಗ್.

