ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ. ನಾಳೆಯೇ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಇದರ ಮಧ್ಯೆ ಕಾಂಗ್ರೆಸ್ ಪಕ್ಷ ಐದು ಭರವಸೆಗಳನ್ನು ನೀಡಿದೆ. ಆ ಭರವಸೆಗಳು ಇದೀಗ ಬಿಜೆಪಿ ನಾಯಕರ ವ್ಯಂಗ್ಯಕ್ಕೆ ಗುರಿಯಾಗಿದೆ. ಈ ಬಗ್ಗೆ ನಳೀನ್ ಕುಮಾರ್ ಕಟೀಲು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಗ್ಯಾರಂಟಿ ಘೋಷಿಸಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ನನಗೂ ಸೇರಿಸಿ ಉಚಿತ ಅಂತ ಭಾಷಣದಲ್ಲಿ ಹೇಳಿದ್ದಾರೆ. ಜನ ಕರೆಂಟ್ ಬಿಲ್ ಕಟ್ಟಬಾರದು. ಅವರೇ ಘೋಷಿಸಿರುವ ಭಾಗ್ಯದಲ್ಲಿ ಜನ ಕರೆಂಟ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ. ಜನರಿಗೂ ವಿನಂತಿ ಮಾಡುತ್ತೇನೆ ಕರೆಂಟ್ ಬಿಲ್ ಕಟ್ಟಬೇಡಿ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜನ ಕೂಡ ಯೋಜನೆಗಳ ಫಲವನ್ನು ತಾವೇ ಪಡೆಯಲು ಶುರು ಮಾಡಿದ್ದಾರೆ. ಕೆಲವೊಂದು ಜಿಲ್ಲೆಯಲ್ಲಿ ಕರೆಂಟ್ ಬಿಲ್ ಕಟ್ಟಿ ಎಂದರೆ ಇಲ್ಲ ನಾವೂ ಕಟ್ಟಲ್ಲ ಎಂದೇ ಹೇಳುತ್ತಿರುವ ಘಟನೆಗಳು ನಡೆಯುತ್ತಿವೆ.


