ಈ ಬಾರಿ ರಾಜ್ಯಕ್ಕೆ ಸಿದ್ದರಾಮಯ್ಯ ಸಿಎಂ ಆಗ್ತಾರಾ ಅಥವಾ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕಾ ಎಂಬ ತಲೆನೋವು ಹೈಕಮಾಂಡ್ ಗೆ ಜೋರಾಗಿಯೇ ಇದೆ. ಮೂಲಗಳ ಪ್ರಕಾರ ಈ ಬಾರಿಯ ಸಿಎಂ ಸ್ಥಾನಕ್ಜೆ ಸಿದ್ದರಾಮಯ್ಯ ಅವರನ್ನೇ ಫೈನಲ್ ಮಾಡಲಾಗಿದೆ ಎನ್ನಲಾಗಿದೆ. ಈಗ ಡಿಕೆ ಶಿವಕುಮಾರ್ ಅವರಿಗೆ ಸಮಾಧಾನ ಮಾಡಲು ಆರು ಬಿಗ್ ಆಫರ್ ಗಳನ್ನು ನೀಡಲಾಗಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಆದರೆ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರನ್ನು ನೇಮಕ ಮಾಡಲಾಗುತ್ತದೆ. ಒಂದೇ ಡಿಸಿಎಂ ಹುದ್ದೆಗೆ ನಿಗದಿ ಮಾಡಲಾಗಿದೆ. ಅದರ ಜೊತೆಗೆ ಈ ಹಿಂದೆ ನಿಭಾಯಿಸಿದ್ದಂತ ಇಂಧನ ಖಾತೆ ಅಥವಾ ಜಲಸಂಪನ್ಮೂಲ ಖಾತೆಯನ್ನು ನೀಡಲಾಗುತ್ತದೆ. ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಮುಂದುವರೆಸುತ್ತಾರೆ. ಡಿಕೆಶಿ ಸೂಚಿಸಿದ 12-15 ಶಾಸಕರಿಗೆ ಸಚಿವ ಸ್ಥಾನ. ಅದರಲ್ಲಿ ಮೂವರಿಗೆ ಪ್ರಬಲ ಖಾತೆ ನೀಡಲಾಗುತ್ತದೆ ಎನ್ನಲಾಗುತ್ತಿದೆ.
ಇದಕ್ಕೆಲ್ಲಾ ಡಿಕೆ ಶಿವಕುಮಾರ್ ಒಪ್ಪುತ್ತಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇಂದು ಡಿಕೆ ಶಿವಕುಮಾರ್ ಅವರು ಕೂಡ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಹೈಕಾಂಡ್ ಭೇಟಿ ಮಾಡಿದ ಬಳಿಕ ಒಂದು ನಿರ್ಧಾರಕ್ಕೆ ಬರಲಿದ್ದಾರೆ.