ಹಾಸ್ಟೇಲ್ ನಲ್ಲಿ ಇದ್ದಕ್ಕಿದ್ದ ಹಾಗೇ ನಾಲ್ಕು ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡು, ಹತ್ತು ಮಂದಿಸಜೀವ ದಹನವಾಗಿರುವಂತಹ ದುರ್ಘಟನೆ ನಡೆದಿದೆ. ಕಟ್ಟಡದಲ್ಲಿ ಇನ್ನು ಇಪ್ಪತ್ತು ಮಂದಿ ಸಿಲುಕಿರುವ ಅನುಮಾನ ವ್ಯಕ್ತವಾಗಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಶೋಧ ಕಾರ್ಯ ಮುಂದುವರೆದಿದೆ. ಈ ಘಟನೆ ನ್ಯೂಜಿಲೆಂಡ್ ನ ವೆಲ್ಲಿಂಗ್ ಟನ್ ನಲ್ಲಿ ನಡೆದಿದೆ.
ರಾತ್ರಿ 12.30ರ ವೇಳೆಗೆ ಹಾಸ್ಟೇಲ್ ಗೆ ಬೆಂಕಿ ಬಿದ್ದಿದೆ. ಕ್ಷಣ ಮಾತ್ರದಲ್ಲಿಯೇ ಬೆಂಕಿ ಧಗಧಗನೆ ಉರಿದಿದೆ. ಕಟ್ಟಡದ ಒಳಗಿದ್ದವರು ಹೊರಗೆ ಬರುವುದಕ್ಕೆ ಸಾಧ್ಯವಾಗಿಲ್ಲ. ಬೆಂಕಿಯ ಕೆನ್ನಾಲೆಗೆ 10 ಜನ ಸಜೀವ ದಹನವಾಗಿದ್ದಾರೆ. 20 ಜನ ಕಾಣೆಯಾಗಿದ್ದು, ಇನ್ನು ಹುಡುಕಾಟ ನಡೆಯುತ್ತಿದೆ.
ಹಾಸ್ಟೇಲ್ ಕಟ್ಟಡದೊಳಗೆ 52 ಜನ ಇದ್ದರು ಎನ್ನಲಾಗಿದೆ. ಇನ್ನು ಹನ್ನೆರಡು ಜನ ಈ ಬೆಂಕಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಬೆಂಕಿಯ ಕೆನ್ನಾಲೆಗೆ ಸಿಲುಕಿ ಗಾಯಗೊಂಡವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಮೂರನೇ ಮಹಡಿಯಲ್ಲಿ ಮೊದಲಿಗೆ ಕಾಣಿಸಿಕೊಂಡ ಬೆಂಕಿ, ಆನಂತರದಲ್ಲಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿತ್ತು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಇನ್ನು ಸಹ ತಿಳಿದು ಬಂದಿಲ್ಲ. ಸದ್ಯ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.