ದಾವಣಗೆರೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಬಹುಮತ ಬಂದಿದೆ. ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಘಟಾನುಘಟಿ ನಾಯಕರೇ ಬಿಜೆಪಿಯಲ್ಲಿಯೇ ಸೋಲು ಕಂಡಿದ್ದಾರೆ. ಸೋಲನ್ನು ಬಿಜೆಪಿ ನಾಯಕರು ಒಂದೊಂದು ರೀತಿಯಲ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದೀಗ ರೇಣುಕಾಚಾರ್ಯ ಅವರು ಬಿಜೆಪಿ ಸೋಲಿನ ಬಗ್ಗೆ ಹೊಸ ವಿಚಾರ ಹೇಳಿದ್ದಾರೆ.

ಸೋಲಿಗೆ ಬಿಜೆಪಿಯ ತಪ್ಪುಗಳೇ ಕಾರಣ. ಮೀಸಲಾತಿ ವಿಚಾರಕ್ಕೆ ಕೈ ಹಾಕಬಾರದಿತ್ತು. ಅದು ಉರಿಯುವ ಬೆಂಕಿಗೆ ತುಪ್ಪ ಸುರಿದಂಗೆ ಆಗಿತ್ತು. 10 ಕೆಜಿ ಅಕ್ಕಿಯನ್ನು ನಿಲ್ಲಿಸಬೇಡಿ ಎಂದು ಹೇಳಬೇಡಿ ಎಂದು ಹೇಳಿದ್ದೆ. ಆದರೂ ನಿಲ್ಲಿಸಿದ್ರು. ಬಸವರಾಜ್ ಬೊಮ್ಮಾಯಿ ಅವರು ನನ್ನ ಮಾತು ಕೇಳಲಿಲ್ಲ. ಬಿಜೆಪಿಯ ತಪ್ಪುಗಳೇ ಈ ಬಾರಿಯ ಸೋಲಿಗೆ ಕಾರಣವಾಯ್ತು.

ಬಿಜೆಪಿ ಬರೀ ಏಳು ದಿನದ ಹಿಂದೆ ಪ್ರಣಾಳಿಕೆಯನ್ನು ಹೊರಡಿಸಿತ್ತು. ಆದ್ರೆ ಕಾಂಗ್ರೆಸ್ ಎರಡು ತಿಂಗಳ ಮೊದಲೇ ಪ್ರಣಾಳಿಕೆ ಹೊರಡಿಸಿತ್ತು. ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ತಲುಪಿವೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.


