ಚಿತ್ರದುರ್ಗ, (ಮೇ.15) : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಉಚಿತ ವಿದ್ಯುತ್ ಆಶ್ವಾಸನೆ ನೀಡಿದ್ದ ಗ್ಯಾರಂಟಿ ಕಾರ್ಡ್ ಚರ್ಚೆಗೆ ಬಂದಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಗ್ರಾಮಸ್ಥರು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
*ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ : ನಾವು ಕರೆಂಟ್ ಬಿಲ್ ಕಟ್ಟಲ್ಲ*
https://t.co/IvUMiZEbud pic.twitter.com/cuNvvQ8BsH
— suddione-kannada News (@suddione) May 15, 2023
ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲಿಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ವಿದ್ಯುತ್ ಪ್ರತಿನಿಧಿಯೊಬ್ಬರು (KEB – BILL READER) ಏಪ್ರಿಲ್ ತಿಂಗಳ ವಿದ್ಯುತ್ ಬಿಲ್ ನೀಡಲು ಹೋದಾಗ ಗ್ರಾಮಸ್ಥರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿದ್ಯುತ್ ಬಿಲ್ ಉಚಿತ ಎಂದು ಹೇಳಿತ್ತು. ಆದ್ದರಿಂದ ನಾವು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಗ್ರಾಮಸ್ಥರು ಗುಡುಗಿದ್ದಾರೆ.
ಇದಕ್ಕೆ ವಿದ್ಯುತ್ ಪ್ರತಿನಿಧಿ ಸರ್ಕಾರದಿಂದ ಆದೇಶ ಬರುವವರೆಗೆ ಹಣ ಪಾವತಿಸಬೇಕು ಎಂದು ವಿವರಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಗ್ರಾಮಸ್ಥರು ಆ ಆದೇಶದ ಬಗ್ಗೆ ಕಾಂಗ್ರೆಸ್ ನವರನ್ನು ನೀವೇ ಕೇಳಿ, ಈ ತಿಂಗಳಿನಿಂದ ಗ್ರಾಮದಲ್ಲಿ ನಾವ್ಯಾರೂ ಯಾರೂ ಹಣ ಕೊಡುವುದಿಲ್ಲ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಪ್ರಜಾಧ್ವನಿ ಯಾತ್ರೆ ಆರಂಭಿಸಿದಾಗ ನೀಡಿದ ಮೊದಲ ಭರವಸೆ ಇದಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದರು. ಅದಕ್ಕೆ ಗೃಹ ಜ್ಯೋತಿ ಯೋಜನೆ ಎಂದು ಹೆಸರಿಡಲಾಗಿತ್ತು.
ಗೃಹಜ್ಯೋತಿ ಯೋಜನೆ ಜೊತೆಗೆ ಗೃಹ ಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ ಸೇರಿದಂತೆ ಇನ್ನು ಕೆಲವು ಮಹತ್ವದ ಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿದೆ.