ರಾಜ್ಯಾದ್ಯಂತ ಮತ ಎಣಿಕೆ ಕಾರ್ಯ ಆರಂಭ. ಮೊದಲಿಗೆ ಅಂಚೆ ಮತಗಳ ಎಣಿಕೆ ಮಾಡಲಾಗುತ್ತದೆ. ಈಗಾಗಲೇ ಸ್ಟ್ರಾಂಗ್ ರೂಮ್ ಆರಂಭವಾಗಲಿದೆ. ಇಂದಿನ ದಿನಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
224 ಕ್ಷೇತ್ರಗಳ ಮತ ಎಣಿಕೆ ಆರಂಭ. 113 ಮ್ಯಾಜಿಕ್ ನಂಬರ್ ಆಗಿದೆ. ಮ್ಯಾಜಿಕ್ ನಂಬರ್ ದಾಟಿದಂತ ಪಕ್ಷ ಸರ್ಕಾರ ರಚನೆ ಮಾಡಲಾಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮ್ಯಾಜಿಕ್ ನಂಬರ್ ಗಿಂತ ಹೆಚ್ಚಿನ ಸಂಖ್ಯೆಯಲ್ಲಿಯೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದ್ರೆ ಸಮೀಕ್ಷೆಯ ಪ್ರಕಾರ ಅತಂತ್ರ ಫಲಿತಾಂಶ ಬರುವ ಸಾಧ್ಯತೆ ಇದೆ.
ಇಂದಿನ ಫಲಿತಾಂಶ ರಾಜಕಾರಣಿಗಳಿಗೂ ಆತಂಕವಿದೆ. ಹೀಗಾಗಿ ಇಂದು ಬೆಳಗ್ಗೆಯಿಂದಾನೇ ದೇವರ ಮೊರೆ ಹೋಗುತ್ತಿದ್ದಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಲ್ಲಿಸು ದೇವರೆ ಎಂದು ಬೇಡಿಕೊಂಡಿದ್ದಾರೆ. ಇನ್ನು ಅಂಚೆ ಮತದಾನ ಆರಂಭವಾಗಿದ್ದು, ಎರಡು ಕ್ಷೇತ್ರದಲ್ಲಿ ಒಂದು ಕಾಂಗ್ರೆಸ್ ಮತ್ತೊಂದು ಸ್ವತಂತ್ರ ಅಭ್ಯರ್ಥಿ ಮುನ್ನಡೆಯಲ್ಲಿದ್ದಾರೆ.