ಬೆಂಗಳೂರು: ಬಹಳ ಕುತೂಹಲದಿಂದ ಕಾಯುತ್ತಿದ್ದ ರಾಜ್ಯ ವಿಧಾನಸಭಾ ಚುನಾವಣೆಯೇನೋ ಮುಗಿದು ಹೋಗಿದೆ. ಫಲಿತಾಂಶಕ್ಕಾಗಿ ರಾಷ್ಟ್ರೀಯ ಪಕ್ಷಗಳು ಒದ್ದಾಡುತ್ತಿವೆ. ಏನೇ ಒದ್ದಾಡಿದರೂ ಇವತ್ತು ಒಂದು ದಿನ ಕಾಯಲೇಬೇಕಾದ ಪರಿಸ್ಥಿತಿ ಇದೆ. ನಾಳೆ ಮಧ್ಯಾಹ್ನದ ಒಳಗೆ ಒಂದು ಚಿತ್ರಣ ಸಿಕ್ಕಿ ಬಿಡುತ್ತೆ. ಅದರ ಜೊತೆಗೆ ಸಮೀಕ್ಷೆಗಳು ಕೂಡ ಈ ಬಾರಿಯೂ ಫಲಿತಾಂಶ ಅತಂತ್ರವಾಗಲಿದೆ ಎಂದೇ ಹೇಳುತ್ತಿವೆ. ಹೀಗಾಗಿ ಎಲ್ಲರ ಚಿತ್ತ ಕುಮಾರಸ್ವಾಮಿಯತ್ತ ನೆಟ್ಟಿದೆ.
ಕುಮಾರಸ್ವಾಮಿ ಅವರು ಕೂಡ ಮೈತ್ರಿ ರಚನೆಯ ಬಗ್ಗೆ ಸುಳಿವು ನೀಡಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ಜೊತೆಗೆ ಮೈತ್ರಿಗೆ ಸಿದ್ಧರಿದ್ದೇವೆ. ಆದರೆ ಅವರು ನಮ್ಮ ಷರತ್ತಿಗೆ ಒಪ್ಪಿಕೊಂಡರೆ ಮಾತ್ರ ಎಂದಿದ್ದಾರೆ. ಕುಮಾರಸ್ವಾಮಿ ಅವರು ಹಾಕಿರುವ ಷರತ್ತು ಈ ರೀತಿ ಇದೆ.
* ನಮ್ಮ ಬೇಡಿಕೆ ಈಡೇರಿಸುವ ಪಕ್ಷದ ಜೊತೆಗೆ ಮಾತ್ರ ಮೈತ್ರಿ
* ಸರ್ಕಾರ ನಡೆಸಲು ಮುಕ್ತ ಸ್ವಾತಂತ್ರ್ಯ ಬೇಕು
* ಜೆಡಿಎಸ್ ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಬೇಕು
* ಮಂಡ್ಯ, ಹಾಸನದಲ್ಲಿ ಮೈತ್ರಿ ಪಕ್ಷದ ಹಸ್ತಕ್ಷೇಪ ಬೇಡ
* ಜೆಡಿಎಸ್ ಪಕ್ಷಕ್ಕೆ ಸರ್ಕಾರದಲ್ಲಿ ಪ್ರಮುಖ ಖಾತೆ ಬೇಕು
* ಚರ್ಚಿಸದೇ ಸೈದ್ಧಾಂತಿಕ ತೀರ್ಮಾನ ಕೈಗೊಳ್ಳಬಾರದು ಎಂಬ ಷರತ್ತುಗಳನ್ನು ಹಾಕಿದ್ದಾರೆ.