ಬೆಂಗಳೂರು: ಇವತ್ತು ಒಂದು ದಿನ ಆದಷ್ಟು ಬೇಗ ಕಳೀಲಿ ಅಂತ ಎಲ್ಲಾ ರಾಜಕೀಯ ಪಕ್ಷಗಳು ಕಾಯುತ್ತಿದ್ದಾರೆ. ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರೆಸಾರ್ಟ್ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ರೆಸಾರ್ಟ್ ರಾಜಕಾರಣ ಮುಗಿದು ಹೋಯ್ತು. ಎಲ್ಲಾ ಎಂಎಲ್ಎಗಳಿಗೂ ಅವರವರ ಪಾರ್ಟಿಯವರು ಕರೆದುಕೊಳ್ತಾರೆ. ಒಂದು ಕಡೆ ಸೇರಿ ಸರ್ಕಾರ ರಚನೆ ಮಾತನಾಡುತ್ತಾರೆ ಎಂದಿದ್ದಾರೆ.
ಇನ್ನು ಆರ್ ಅಶೋಕ್ ಅವರು ಕಪ್ ನಮ್ಮದೆ ಎಂದು ಹೇಳಿರುವ ಬಗ್ಗೆ ಮಾತನಾಡಿದ ಡಿಕೆಶಿ, ಎಷ್ಟೇ ನಂಬರ್ ಬಂದರೂ ಸರ್ಕಾರ ಮಾಡ್ತೀವಿ ಅಂದಿದ್ದಾರಲ್ಲ, ಕಪ್ ಅಶೋಕ್ ಅವರೇ ಇಟ್ಟುಕೊಳ್ಳಿ. ಎಲ್ಲಾ ಪಕ್ಷದವರು ಅವರವರ ಶಾಸಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಯಾವ ಅಧಿಕಾರದ ಹಂಚಿಕೆಯ ಮಾತೂ ಇಲ್ಲ. ನಾವೂ ಖರ್ಗೆ, ಸೋನಿಯಾ, ರಾಹ್ ಹೇಳಿದಂತೆ ಕೇಳ್ತೀವಿ.
ಎಕ್ಸಿಟ್ ಪೋಲ್ ಬಗ್ಗೆ ನಂಗೆ ನಂಬಿಕೆ ಇಲ್ಲ. ನನ್ನ ನಂಬಿಕೆ 141 ಸೀಟು. ಕಾಂಗ್ರೆಸ್ ಪರವಾಗಿ ಅಲೆ ಇದೆ. ಎಕ್ಸಿಟ್ ಪೋಲ್ ನಮ್ಮ ಬಗ್ಗೆ ವಿಶ್ವಾಸ ತೋರಿಸಿದ್ದಕ್ಕೆ ಧನ್ಯವಾದ. ನಾನು ಗ್ರೌಂಡ್ ನಲ್ಲಿದ್ದವನು.. ಹೋಂ ವರ್ಕ್ ಮಾಡಿದ್ದೀನಿ. ಬಿಜೆಪಿ ಎಷ್ಟೇ ಹಣ ಸುರಿದಿದ್ದರು. ನನಗೆ ವಿಶ್ವಾಸವಿದೆ. ನಾಳೆ 1 ಗಂಟೆಯಷ್ಟರಲ್ಲಿ ಎಲ್ಲಾ ತೀರ್ಪು ನಮ್ಮ ಕಡೆಗೆ ಬರುತ್ತೆ. ನಾನು ಪಕ್ಷಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೀನಿ. ಸಿದ್ದರಾಮಯ್ಯ ಬೈ ಎಲೆಕ್ಷನ್ ಬಳಿಕ ರಾಜೀನಾಮೆ ಕೊಟ್ರು. ಆಮೇಲೆ ಸೋನಿಯಾ ಗಾಂಧಿ ಅವರು ನನಗೆ ಜವಬ್ದಾರಿ ನೀಡಿದ್ದಾರೆ. ಅಲ್ಲಿಂದ ನಾನು ಮಲಗಿಲ್ಲ. ಪಕ್ಷ ಕಟ್ಟುವುದಕ್ಕೆ ಶ್ರಮಿಸಿದ್ದೇನೆ ಎಂದಿದ್ದಾರೆ.