ಸಿದ್ದರಾಮಯ್ಯ ಅವರಿಗೆ ದಿಢೀರ್ ಅನಾರೋಗ್ಯ : ಅಂಥದ್ದೇನಾಯ್ತು..?

suddionenews
1 Min Read

ಬೆಂಗಳೂರು: ಚುನಾವಣೆ ಮುಗಿದು ಇನ್ನು ಎರಡು ದಿನ ಕಳೆದಿದೆ ಅಷ್ಟೇ. ಆದ್ರೆ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಕಾಡಿದೆ. ಚುನಾವಣೆಗೂ ಮುನ್ನ ಪ್ರಚಾರಕ್ಕೆಂದೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದ್ದಾರೆ. ಈಗ ಫಲಿತಾಂಶಕ್ಕಾಗಿ ಕಾಯುತ್ತಿರುವ ನಡುವೆ ಸಿದ್ದರಾಮಯ್ಯ ಅವರಿಗೆ ಮತ್ತೆ ಕೈನೋವು ಕಾಣಿಸಿಕೊಂಡಿದೆ.

ಅನಾರೋಗ್ಯ ಕಾಡಿದೆ ಎಂದು ಗೊತ್ತಾದ ಕೂಡಲೇ ನಿವಾಸಕ್ಕೆ ವೈದ್ಯರು ಬಂದಿದ್ದಾರೆ. ಶಿವಾನಂದ ವೃತ್ತದ ಬಳಿ ಇರುವ ಸರ್ಕಾರಿ ನಿವಾಸಕ್ಕೆ ಸಿದ್ದರಾಮಯ್ಯ ಅವರ ಕುಟುಂಬದ ವೈದ್ಯರಾದ ರವಿಕುಮಾರ್ ಬಂದಿದ್ದು, ತಪಾಸಣೆ ನಡೆಸಿದ್ದಾರೆ.

ತಪಾಸಣೆ ಬಳಿಕ ಮಾತನಾಡಿದ ವೈದ್ಯ ರವಿಕುಮಾರ್, ಸಿದ್ದರಾಮಯ್ಯ ಅವರ ಕೈ ಊತ ಸ್ವಲ್ಪ ಕಡಿಮೆಯಾಗಿದೆ. ಪೂರ್ಣ ಊತ ಕಡಿಮೆಯಾಗುವುದಕ್ಕೆ ಇನ್ನು ಕೆಲ ಸಮಯ ಬೇಕಾಗುತ್ತದೆ. ಹೀಗಾಗಿ ಎರಡು ವಿಶ್ರಾಂತಿ ಪಡೆಯಬೇಕಾಗಿದೆ. ಇದನ್ನ ಬಿಟ್ಟರೆ ಅವರ ಆರೋಗ್ಯ ಚೆನ್ನಾಗಿದೆ ಎಂದಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯ ಅವರು ಜನರ ನಡುವೆ ಸಾಕಷ್ಟು ಓಡಾಟ ನಡೆಸಿದ್ದಾರೆ. ನೂಕು ನುಗ್ಗಲಿನಲ್ಲಿ ಸಿದ್ದರಾಮಯ್ಯ ಅವರ ಕೈಗೆ ಗಾಯವಾಗಿತ್ತು. ಕೊಪ್ಪಳದಲ್ಲಿ ಆ ಘಟನೆ ನಡೆದಿತ್ತು. ಕೈ ಗಾಯವಾದರೂ ಸಿದ್ದರಾಮಯ್ಯ ಅವರು ಅಬ್ಬರದ ಪ್ರಚಾರ ನಡೆಸಿದ್ದರು. ಹೀಗಾಗಿ ಕೈಯಲ್ಲಿ ಊತ ಕಾಣಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *