ಬೆಂಗಳೂರು: ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಫಲಿತಾಂಶಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಕಳೆದ ಬಾರಿಯ ಫಲಿತಾಂಶ ಅತಂತ್ರವಾಗಿತ್ತು. ಹಾಗೋ ಹೀಗೋ ಮಾಡಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದರು. ಅದು ಆರೇ ತಿಂಗಳು. ಹದಿನೇಳು ಶಾಸಕರು ಸರ್ಕಾರದಿಂದ ಕಾಲ್ಕಿತ್ತು ಬಿಜೆಪಿ ಸೇರಿದ್ದರು. ಅದು ಆಪರೇಷನ್ ಕಮಲಕ್ಕೆ ಒಳಗಾಗಿದ್ದರು. ಈ ಬಾರಿಯೂ ಸ್ಪಷ್ಟ ಬಹುಮತ ಬರುವುದು ಅನುಮಾನ ಎನ್ನಲಾಗಿದೆ. ಬಂದರೂ ಅದು ಕಾಂಗ್ರೆಸ್ ಪರವಾದ ಅಲೆ ಎದ್ದಿದೆ.
ಈ ಮಧ್ಯೆ ಆರ್ ಅಶೋಕ್ ಒಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಲ್ಲಿ ಸಮೀಕ್ಷೆಗಳು ನೀಡಿರುವ ಹೇಳಿಕೆ ನಿಜವಾಗುತ್ತೆ ಎಂದು ಹೇಳುವ ಹಾಗಿಲ್ಲ. ಕೆಲವೊಂದು ಕಡೆ ಸತ್ಯವಾಗಿದೆ ಅಷ್ಟೆ. ಆದರೆ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಬಾರಿ ಬಿಜೆಪಿಗೆ ಬಹುಮತ ಬರುತ್ತೆ ಅನ್ನೋದು. ಜನರಿಗೆ ಗೊತ್ತಾಗಿದೆ ಏನಾದರೂ ಆಗಲಿ ಡಬಲ್ ಇಂಜಿನ್ ಸರ್ಕಾರ ಬರಲಿ ಎಂಬುದೇ ಆಗಿದೆ. ಹೀಗಾಗಿ ಜನರು ನಿರ್ಧಾರ ಮಾಡಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ ಸರ್ಕಾರ ರಚನೆ ಮಾಡುವುದು ನಾವೇ. ಯಾಕಂದ್ರೆ ಕಾಂಗ್ರೆಸ್ ಗೂ ಬಹುಮತ ಸಿಗಲ್ಲ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ ಸರ್ಕಾರ ರಚನೆಗೂ ಹೈಕಮಾಂಡ್ ನ ಸಹಾಯ ಬೇಕಾಗುತ್ತೆ ಎಂದಿದ್ದಾರೆ.
ನಾವೇ ಸರ್ಕಾರ ರಚನೆ ಮಾಡುವುದು, ಹೈಕಮಾಂಡ್ ಈ ಎಲ್ಲಾ ಪದಗಳು ಮತ್ತೆ ಬಿಜೆಪಿ ಏನಾದರೂ ಆಪರೇಷನ್ ಕಮಲಕ್ಕೆ ಕೈ ಹಾಕಿದೆಯಾ ಎಂಬ ಅನುಮಾನ ಹುಟ್ಟು ಹಾಕಿದೆ.