ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಮೇ.8:
ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಚಿತ್ರದುರ್ಗ ಜಿಲ್ಲೆ ಶೇ.96.8ರಷ್ಟು ದಾಖಲೆಯ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.
ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆ ಬರೆದ 21995 ವಿದ್ಯಾರ್ಥಿಗಳು ಪೈಕಿ 21300 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.96.8 ಫಲಿತಾಂಶ ಲಭಿಸಿದೆ. 2021-22ನೇ ಸಾಲಿನಲ್ಲಿ ಶೇ.94.3 ದಾಖಲಿಸಿತ್ತು. ಪ್ರಸ್ತುತ ವರ್ಷದ ಫಲಿತಾಂಶವು ಕಳೆದ ವರ್ಷಕ್ಕಿಂತ ಶೇ.2.49ರಷ್ಟು ಹೆಚ್ಚಳವಾಗಿರುತ್ತದೆ.
20978 ವಿದ್ಯಾರ್ಥಿಗಳು ಉತ್ತೀರ್ಣ: ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 21898 ವಿದ್ಯಾರ್ಥಿಗಳ ಪೈಕಿ 10458 ಬಾಲಕರು ಹಾಗೂ 10520 ಬಾಲಕಿಯರು ಸೇರಿ ಒಟ್ಟು 20978 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಚಳ್ಳಕೆರೆ ತಾಲ್ಲೂಕಿನಲ್ಲಿ 2275 ಬಾಲಕರು ಹಾಗೂ 2164 ಬಾಲಕಿಯರು ಸೇರಿ ಒಟ್ಟು 4439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 2861 ಬಾಲಕರು ಹಾಗೂ 2891 ಬಾಲಕಿಯರು ಸೇರಿ ಒಟ್ಟು 5752 ವಿದ್ಯಾರ್ಥಿಗಳು ಉತ್ತೀರ್ಣರಾಗಿದಾರೆ.
ಹಿರಿಯೂರು ತಾಲ್ಲೂಕಿನಲ್ಲಿ 1677 ಬಾಲಕರು ಹಾಗೂ 1681 ಬಾಲಕಿಯರು ಸೇರಿ ಒಟ್ಟು 3358 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ 1168 ಬಾಲಕರು ಹಾಗೂ 1343 ಬಾಲಕರು ಸೇರಿ ಒಟ್ಟು 2511 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಹೊಸದುರ್ಗ ತಾಲ್ಲೂಕಿನಲ್ಲಿ 1478 ಬಾಲಕರು ಹಾಗೂ 1455 ಬಾಲಕಿಯರು ಸೇರಿ ಒಟ್ಟು 2933 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 999 ಬಾಲಕರು ಹಾಗೂ 986 ಬಾಲಕಿಯರು ಸೇರಿ ಒಟ್ಟು 1985 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ