ಬೆಳಗ್ಗೆ ಬೆಳಗ್ಗೆನೆ ಹೆಂಡತಿ ಜೊತೆಗೆ ದೇವಸ್ಥಾನಕ್ಕೆ ಹೋಗಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿರುವ ಘಟನೆ ಗುಜರಾತ್ ನ ವಲ್ಸಾದ್ ಜಿಲ್ಲೆಯಲ್ಲಿ ನಡೆದಿದೆ. ಶೈಲೇಶ್ ಪಟೇಲ್ ಮೃತ ಕಾರ್ಯಕರ್ತ.
ಶೈಲೇಶ್, ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷರಾಗಿದ್ದರು. ಇಂದು ಬೆಳಗ್ಗೆ 7.30ರ ಸುಮಾರಿಗೆ ತನ್ನ ಪತ್ನಿ ಜೊತೆಗೆ ವಾಪಿ ನಗರದ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿದ ಬಳಿಕ ಹೊರಗಡೆ SUV ಕಾರಿನಲ್ಲಿ ಹೆಂಡತಿಗಾಗಿ ಕಾದು ಕುಳಿತಿದ್ದರು. ಅಲ್ಲಿಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆದಿದೆ.
ಶೈಲೇಶ್ ಪಾಟೀಲ್ ಮೇಲೆ ಎರಡು ಸುತ್ತು ಗುಂಡಿನ ಸುರಿಮಳೆ ನಡೆಸಿದ್ದಾರೆ. ಇದರಿಂದಾಗಿ ಶೈಲೇಶ್ ಪಾಟೀಲ್ ಕಾರಿನಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರ ಪತ್ನಿ ಕಾರಿನ ಬಳಿ ಬರುವಷ್ಟರಲ್ಲಿಯೇ ಆಗಂತುಕರು ಎಸ್ಕೇಪ್ ಆಗಿದ್ದರು. ಶೈಲೇಶ್ ಪಾಟೀಲ್ ಅವರನ್ನಿ ತಕ್ಷಣ ಆಸ್ಪತ್ರೆಗೆ ದಾಖಲಿಸಿತ್ತಾದರೂ ಬದುಕುಳಿದಿಲ್ಲ. ಈ ಸಂಬಂಧ ವಲ್ಸಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಕಾ ಬಂಧಿ ಹಾಕಿ, ಹಲ್ಲೆ ಮಾಡಿದವರ ಹುಡುಕಾಟದಲ್ಲಿದ್ದಾರೆ.