ಚಿತ್ರದುರ್ಗ, (ಮೇ.08) : ನಗರದ ಹೊರವಲಯದ ಪಿಳ್ಳೇಕೆರೆನಹಳ್ಳಿ ಯಲ್ಲಿರುವ ಬಾಪೂಜಿ ಪಬ್ಲಿಕ್ ಸ್ಕೂಲ್ ನ 2022 -23 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು 32 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 32 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 100ರಷ್ಟು ಫಲಿತಾಂಶ ಬಂದಿರುತ್ತದೆ . 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಕು.ಮೊಹಮದ್ ಸಲ್ಮಾನ್ . ಪಿ.ಬಿ 600 ಅಂಕಗಳು, ಕು. ಸಂಜನಾ. ಆರ್ 598 ಅಂಕಗಳೊಂದಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಇಂಗ್ಲೀಷ್ ಭಾಷೆಯಲ್ಲಿ 03 ವಿದ್ಯಾರ್ಥಿಗಳು, ಹಿಂದಿ ಭಾಷೆಯಲ್ಲಿ 02 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ ದಲ್ಲಿ 02 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಫಲಿತಾಂಶಕ್ಕೆ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ.ಎಂ.ವೀರೇಶ್ , ಸಂಸ್ಥೆಯ ನಿರ್ದೇಶಕರಾದ ಕೆ ಎಂ.ಚೇತನ್ , ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.