ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಪ್ರಧಾನಿ ರೋಡ್ ಶೋ : ಬೆಂಗಳೂರಿಗೆ ಬಂದಿಳಿದ ಪ್ರಧಾನಿ

1 Min Read

 

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಧಾನಿ ಮೋದಿ ಅವರು ಪ್ರಚಾರ ಮಾಡಲು ಬೆಂಗಳೂರಿಗೆ ಬಂದಿಳಿದಿದ್ದಾರೆ. ಸೋಮೇಶ್ವರ ಸಭಾ ಭವನದ ಬಳಿ ಬಂದಿರುವ ಮೋದಿ ಅವರನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

ಪ್ರಧಾನಿ ಮೋದಿ ಆಗಮನಕ್ಕೆ ಇಡೀ ಬೆಂಗಳೂರು ಕೇಸರಿಮಯವಾಗಿದೆ. ಪ್ರಧಾನಿ ಮೋದಿ ಅವರಿಗೆ ಪೇಟ ತೊಡಿಸಿ, ಹೂವಿನ ಹಾರವನ್ನು ಹಾಕಿ ಸ್ವಾಗತ ಮಾಡಲಾಗಿದೆ. ವಾದ್ಯಗಳೊಂದಿಗೆ ಪ್ರಧಾನಿಯವರನ್ನು ಮೆರವಣಿಗೆ ಮೂಲಕ ಕರೆ ತರಲಾಗುತ್ತಿದೆ. ಪ್ರಧಾನಿಯವರನ್ನು ಕಂಡೊಡನೆ ಜನ ಮೋದಿ ಮೋದಿ ಅಂತ ಕೂಗುವುದು ಕೇಳಿಸುತ್ತಿದೆ.

ಮೋದಿಯವರ ರೋಡ್ ಶೋ ಬೆಂಗಳೂರಿನಲ್ಲಿ ಆರಂಭವಾಗಿದೆ. ತೆರೆದ ವಾಹನದಲ್ಲಿ ಮೋದಿ ಅವರ ರೋಡ್ ಶೋ ಆರಂಭವಾಗಿದೆ. ಸುತ್ತಲು ಜನ ನೆರೆದಿದ್ದು, ಬಿಗಿ ಭದ್ರತೆಯೊಂದುಗೆ ರೋಡ್ ಶೋ ಆರಂಭವಾಗಿದೆ. ಮೋದಿಯವರ ಜೊತೆಗೆ ಪಿ ಸಿ ಮೋಹನ್, ಸಂಸದ ತೇಜಸ್ವಿ ಸೂರ್ಯ ಜೊತೆಯಾಗಿದ್ದಾರೆ. ಇವತ್ತು ಮತ್ತು ನಾಳೆ ಬೆಂಗಳೂರಿನ ಪ್ರಮುಖ ನಗರದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಇಂದು ಜೆಪಿ ನಗರದಿಂದ ಆರಂಭವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *