ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಯ ರಣಕಣ ಜೋರಾಗಿದೆ. ಮೂರು ಪಕ್ಷಗಳಿಗೆ ಸ್ಟಾರ್ ಪ್ರಚಾರಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸುದೀಪ್, ದರ್ಶನ್, ಶಿವಣ್ಣ ಹೀಗೆ ಸ್ಟಾರ್ ಗಳು ಆಯಾ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಸದ್ಯ ಶಿವಣ್ಣ ಅವರ ಪ್ರಚಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದು, ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಗೀತಾ ಶಿವರಾಜ್ ಕುಮಾರ್ ಅವರು ಜಾಂಗ್ರೆಸ್ ಸೇರ್ಪಡೆಯಾದರು. ಆದರೆ ಶಿವರಾಜ್ ಕುಮಾರ್ ಯಾವುದೇ ಪಕ್ಷವನ್ನು ಸೇರಿಲ್ಲ. ಬದಲಿಗೆ ಗೀತಾ ಶಿವರಾಜ್‍ಕುಮಾರ್ ಮತ್ತು ಮಧು ಬಂಗಾರಪ್ಪ ಇರುವ ಕಾರಣ ಕಾಂಗ್ರೆಸ್ ಗೆ ಸಪೋರ್ಟ್ ಮಾಡ್ತಾ ಇದ್ದಾರೆ.
ಶಿವರಾಜ್‍ಕುಮಾರ್ ಅವರು ಇಂದು ಸಿದ್ದರಾಮಯ್ಯ ಅವರ ಪರ ವರುಣಾದಲ್ಲಿ ಪ್ರಚಾರ ನಡೆಸಿದ್ದಾರೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, “ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ!
ಅವರವ ಭಾವ ಭಕುತಿಗೆ” ಎಂದಿದ್ದಾರೆ. ಇದಕ್ಕೆ ನೆಟ್ಟಿಗರೊಬ್ಬರು ” ರಾಜ್ಯಕ್ಕೆ ಬೆಂಕಿ ಹಚ್ಚಿದು ಆಯ್ತು, ಇವಾಗ ದೊಡ್ಮನೆ ಕುಟುಂಬದಲ್ಲಿ ಬೆಂಕಿ ಹಚ್ಚಕ್ಕೆ ಪ್ರಯತ್ನ ಪಡ್ತೀಯಾ” ಅಂತ ಟ್ವೀಟ್ ರಿಪ್ಲೆ ಮಾಡಿದ್ದಾರೆ.