Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮದಕರಿ, ಓಬವ್ವ ನಾಡಿನ ಜನರಿಗೆ ನಮಸ್ಕಾರಗಳು : ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ಸಂಪೂರ್ಣ ಮಾಹಿತಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ, (ಮೇ. 02) : ಕಾಂಗ್ರೆಸ್ ಹಾಗೂ ಜೆಡಿಎಸ್ ಉದ್ದೇಶ ಆತಂಕವಾದಿಗಳನ್ನು ತುಷ್ಟೀಕರಣ ಮಾಡುವುದಾಗಿದೆ. ಇದನ್ನು ಸದೆ ಬಡೆದು ಬಿಜೆಪಿ ದೇಶದ ಅಭಿವೃದ್ಧಿಗೆ ಭದ್ರ ಬೂನಾದಿ ಹಾಕಿ, ಎಲ್ಲರ ಅಭಿವೃದ್ಧಿಗಾಗಿ ದುಡಿಯುತ್ತಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮುಂದಾಗಬೇಕು ಎಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.

ನಗರದ ಶ್ರೀ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿ ಚಿತ್ರದುರ್ಗ ಬಿಜೆಪಿ ಸಮಾವೇಶದಲ್ಲಿ ಮೋದಿ ಭಾಷಣ ಮದಕರಿ ನಾಯಕ, ಒನಕೆ ಓಬವ್ವರನ್ನು ಸ್ಮರಿಸಿದ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಮದಕರಿ, ಓಬವ್ವ ನಾಡಿನ ಜನರಿಗೆ ನಮಸ್ಕಾರಗಳು ಎಂದು ಭಾಷಣ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಗೆ ಆಶೀರ್ವದಿಸಲು ಬಂದಿದ್ದೀರಿ ಕರ್ನಾಟಕದ ಜನರು ಸ್ಪಷ್ಟವಾಗಿ ನಿರ್ಧರಿಸಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಘೋಷಣೆ ಕರ್ನಾಟಕ ಬಿಜೆಪಿ ಟೀಮ್ ಗೆ ಅಭಿನಂದನೆ ಸಲ್ಲಿಸುವೆ ಬಿಜೆಪಿ ಉತ್ತಮ ಪ್ರಣಾಳಿಕೆ ಪತ್ರ ಬಿಡುಗಡೆ ಮಾಡಿದೆ.

ರಾಜ್ಯ ಅಭಿವೃದ್ಧಿಯ ಬ್ಲೂ ಪ್ರಿಂಟ್ ಪ್ರಣಾಳಿಕೆಯಲ್ಲಿದೆ. ಮಹಿಳೆಯರು, ಯುವಕರು, ದಲಿತರು ಸರ್ವರ ಅಭಿವೃದ್ಧಿಯ ಸಂಕಲ್ಪವಿದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಯೋಜನೆ ಇದೆ ಎಂದರು.

ಕರ್ನಾಟಕದ ಚುನಾವಣೆ ರಾಜ್ಯವನ್ನು ದೇಶದ ನಂಬರ್ 1 ಆಗಿಸುವ ಚುನಾವಣೆ ಈ ಚುನಾವಣೆ ರಾಜ್ಯದ ಅಭಿವೃದ್ಧಿಯ ನಿರ್ಣಾಯಕರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಬರಬೇಕು ಡಬಲ್ ಇಂಜಿನ್ ಸರ್ಕಾರ ತರಬೇಕು ಎಂದು ಮೋದಿ ಕರೆ ನೀಡಿ ನನ್ನ ಮಾತಿನ ಮೇಲೆ ನೀವೆಲ್ಲಾ ವಿಶ್ವಾಸ ಮಾಡುತ್ತೀರಿ ಅಲ್ಲವೇ ಪ್ರಶ್ನೆಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ದೂರ ಇರಬೇಕು ಕಾಂಗ್ರೆಸ್, ಜೆಡಿಎಸ್ ನೋಡಲು ಬೇರೆ ಬೇರೆ ಇವೆ.  ಆದ್ರೆ, ಹೃದಯದಿಂದ ಎರಡೂ ಪಕ್ಷಗಳು ಒಂದೇ ಆಗಿವೆ ಕಾಂಗ್ರೆಸ್, ಜೆಡಿಎಸ್ ಪರಿವಾರಗಳ ಪಕ್ಷ ಭ್ರಷ್ಟಾಚಾರ, ಕುಟುಂಬದ ಆಡಳಿತವೇ ಅವರಿಗೆ ಮುಖ್ಯ ಅಭಿವೃದ್ಧಿ ಮತ್ತು ನಿಮ್ಮ ಮಕ್ಕಳ ಬಗ್ಗೆ ಅವರು ಯೋಚಿಸಲ್ಲ ಎಂದು ಮೋದಿ ತಿಳಿಸಿದರು.

ಸರ್ಜಿಕಲ್ ಸ್ಟ್ರೈಕ್ ಮೂಲಕ ದೇಶದಲ್ಲಿ ಯೋಧರು ಆತಂಕವಾದಿಗಳನ್ನು ಸದೆ ಬಡೆದರೆ, ಕಾಂಗ್ರೇಸ್ ನಾಯಕರು ಯೋಧರನ್ನೆ ಅಪಮಾನ ಮಾಡುವ ಕೆಲಸ ಮಾಡುತ್ತಾರೆ. ಅಲ್ಲದೆ ಕರ್ನಾಟಕದಲ್ಲಿ ಅತಂಕವಾದಿಗಳನ್ನು ಸೆರೆಹಿಡಿದರೆ ಅವರ ಪರವಾಗಿ ಮಾತನಾಡುವ ಮೂಲಕ ಮರುಕ ಪಡುತ್ತಾರೆ. ಇಂತ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷಗಳು ದೇಶಕ್ಕೆ ಮಾರಕವಾಗಿವೆ ಇಂತಹವರ ಬಗ್ಗೆ ಜನತೆ ಸದಾ ಜಾಗರೂಕತೆ ವಹಿಸಬೇಕು ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರಲಿಲ್ಲ ಕಾಂಗ್ರೆಸ್, ಜೆಡಿಎಸ್ ದುರಾಡಳಿತದಿಂದ ನಿರ್ಲಕ್ಷಿಸಿದ್ದರು ಡಬಲ್ ಇಂಜನ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ತಂದಿದೆ ಈ ಭಾಗದ ಅಭಿವೃದ್ಧಿಗೆ ಯೋಜನೆ ಸಹಕಾರಿ ಆಗಲಿದೆ ಕೇಂದ್ರದಿಂದ ಸುಮಾರು5.500ಕೋಟಿ ನೀಡಿದ್ದೇವೆ ಈ ಭಾಗಕ್ಮೆ ನೀರು ಹರಿಸುವ ಯೋಜನೆ ಇದಾಗಿದೆ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ ಆ ಮೂಲಕ ಈ ಭಾಗದ ರೈತರು, ಜನರ ಅಭಿವೃದ್ಧಿ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಬಿಜೆಪಿ ಡಬಲ್ ಇಂಜಿನ್ ಸರ್ಕಾರದಿಂದ ತ್ವರಿತ ಅಭಿವೃದ್ಧಿ ಹೆದ್ದಾರಿಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಕ್ರಮ ಡಬಲ್ ಇಂಜಿನ್ ಸರ್ಕಾರ ರೈಲ್ವೆ ಯೋಜನೆಗೆ ರೂಪಿಸಿದೆ ಅನೇಕ ಏರ್ ಪೋರ್ಟ್ ಗಳನ್ನು ನಿರ್ಮಾಣ ಮಾಡಿದೆ ಬಜೆಟ್ ನಲ್ಲಿ ದೊಡ್ಡಮಟ್ಟದ ಹಣ ನೀಡಲಾಗಿದೆ 3.500ಕೋಟಿ ವೆಚ್ಚದಲ್ಲಿ ಈ ಭಾಗದ ಹೆದ್ದಾರಿ ಅಭಿವೃದ್ಧಿ ಚಿತ್ರದುರ್ಗ ಸೇರಿ ರಾಜ್ಯದಲ್ಲಿ 9ಕೈಗಾರಿಕೆ ಸ್ಥಾಪನೆ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡಲಾಗಿದೆ ಎಂದರು.

ದೇಶದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೇಸ್ ಪಕ್ಷ ಅವನತಿ ಕಾಣುತ್ತಿದೆ. ಇನ್ನೂ ಅವರು ನೀಡುತ್ತಿರು ಗ್ಯಾರೆಂಟಿ ಕಾರ್ಡ್ ಗಳಿಗೆ ಯಾವುದೇ ಗ್ಯಾರೆಂಟಿ ಬೆಲೆ ಇಲ್ಲ. ಇದೇ ರೀತಿ ಗುಜರಾತ್ ರಾಜ್ಯದಲ್ಲಿ ಗ್ಯಾರೆಂಟಿ ಕಾರ್ಡ್‍ಗಳನ್ನು ನೀಡಿತು. ಅದಕ್ಕೆ ಅಲ್ಲಿನ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಲ್ಲದೆ ಅವರು ನೀಡುತ್ತಿರುವ ಗ್ಯಾರೆಂಟಿಗಳನ್ನು ಈಡೇರಿಸಬೇಕಾದರೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಬೇಕಾಗುತ್ತದೆ. ಈ ಬಗ್ಗೆ ಜನತೆ ಎಚ್ಚರ ವಹಿಸಬೇಕು ಎಂದು ಹೇಳಿದ ಅವರು, ಕಾಂಗ್ರೇಸ್ ನಾಯಕರ ಮಾತಿನ ಬರದಲ್ಲಿ ಲಿಂಗಾಯುತ ಸೇರಿದಂತೆ ಎಲ್ಲಾ ಧರ್ಮಗಳನ್ನು ಅಪಮಾನ ಮಾಡುವ ಕೆಲಸವನ್ನು ಮಾಡುತ್ತಾ, ಸಮಾಜ ಸಮಾಜಗಳ ಮಧ್ಯೆ ಬೆಂಕಿ ಹಚ್ವಿ ಹೊಡೆಯುವ ಕೆಲಸ ಮಾಡಿ, ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಮದಕರಿನಾಯಕ, ವೀರ ವನಿತೆ ಒನಕೆ ಒಬವ್ವ ಜನತೆಗೆ ನನ್ನ ನಮಸ್ಕಾರಗಳನ್ನು ತಿಳಿಸಿದ ಮೋದಿ, ದುರ್ಗ ಏಳು ಸುತ್ತಿನ ಕೋಟೆ ಎಷ್ಟು ಸುರಕ್ಷಿತವಾಗಿದೆಯೋ ಅದೇ ರೀತಿ ನಾಡಿನ ಜನರನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಬಡವರಿಗೆ ಮನೆಗಳನ್ನು, ಗ್ಯಾಸ್, ನೀರು, ದಲಿತ ಕಲ್ಯಾಣ ಯೋಜನೆಯಡಿ ಆಹಾರ ನೀಡಲಾಗುತ್ತಿದೆ. ಆಯುಷ್ಮಾನ್ ಯೋಜನೆಯಡಿ ಜನರ ಆರೋಗ್ಯ ಕಾಪಾಡಲಾಗುತ್ತಿದೆ. ಮುದ್ರಾ ಯೋಜನೆಯಡಿ ಸಾಕಷ್ಟು ಜನರಿಗೆ ಸ್ವ-ಉದ್ಯೋಗ ನೀಡಿದ್ದೆವೆ. ಸಾಮಾಜಿಕ ಭದ್ರತೆಯನ್ನು ನೀಡಲಾಗುತ್ತಿದೆ. ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ಸಕಾಷ್ಟು ಸೌಲಭ್ಯಗಳನ್ಮು ಬಂಜಾರ, ಆದಿವಾಸಿ ಸಮುದಾಯಗಳಿಗರ ಹಕ್ಕುಪತ್ರ ನೀಡುವುದರ ಜೊತೆ ಭೂಮಿ ಇಲ್ಲಾದವರಿಗೆ ಭೂಮಿ, ಮಕ್ಕಳಿಗೆ ವಿದ್ಯಾರ್ಥರವೇತನ ನೀಡುತ್ತಾ ಬಂದಿದ್ದೆವೆ ಎಂದು ಹೇಳಿದರು.

ಕಾಂಗ್ರೇಸ್ ಪಕ್ಷ 65 ವರ್ಷದಲ್ಲಿ ಎಷ್ಟು ವೈದ್ಯಕೀಯ ಕಾಲೇಜು ತೆರೆದಿತ್ತು ಅದಕ್ಕೆ ಡಬ್ಬಲ್ ಆಗಿ ಬಿಜೆಪಿ ಸರ್ಕಾರ ವೈದ್ಯಕೀಯ ಕಾಲೇಜುಗಳನ್ನು ತೆರೆದು, ಬಡವರ ಮಕ್ಕಳು ಕೂಡ ವೈದ್ಯರಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಕರ್ನಾಟಕ ಬಿಜೆಪಿ ಚುನಾವಣೆ ಪ್ರಣಾಳಿಕೆ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದೆ. ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮಾನ್ಯತೆ ನೀಡಿ, ಮೂಲಭೂತ ಸೌಕರ್ಯಗಳ ಕಲ್ಪಿಸುದರ ಜೊತೆಗೆ ಎಲ್ಲರ ಸುರಕ್ಷತೆ ಬಯಸಿ, ಸಬ್ ಕಾ ಸಾಥ್, ಸಾಬ್ ಕಾ ವಿಕಾಸ್ ಎಂಬ ನೀತಿಯನ್ನು ಅನುಸರಿಸಿದೆ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಅಭಿನಂದಿಸಿದ ಅವರು, ಈ ಭಾರೀಯ ಜನರ ನಿರ್ಧಾರ ಬಿಜೆಪಿ ಆಗಬೇಕು. ಈ ಚುನಾವಣೆ ಕರ್ನಾಟಕವನ್ನು ನಂ.1 ಮಾಡುವ ಚುನಾವಣೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸಿ, ಡಬಲ್ ಇಂಜಿನ್ ಸರ್ಕಾರವನ್ನು ಮತ್ತೊಮ್ಮೆ ತರಬೇಕು. ಅಭಿವೃದ್ಧಿಯಲ್ಲಿ ಕರ್ನಾಟಕ ನಂ.1 ಆಗಿ ಮಾಡಬೇಕು ಎಂದು ಮನವಿ ಮಾಡಿದರು.

ಚಿತ್ರದುರ್ಗದ ಏಳು ಸುತ್ತಿನ ಕೋಟೆ ಸುರಕ್ಷತೆಯ ಕೋಟೆ. ಏಳು ಸುತ್ತಿನ ಕೋಟೆಯ ಉದಾಹರಣೆ ನೀಡಿ ಯೋಜನೆಗಳನ್ನು ಹೇಳಿದ ಮೋದಿ ಬಿಜೆಪಿ ಸರ್ಕಾರ ಸಹ ಜನರಿಗಾಗಿ ಸುರಕ್ಷೆಯ ಯೋಜನೆ ತಂದಿದೆ. ಏಳು ಸುತ್ತಿನ ಭದ್ರತೆಯನ್ನು ಜನರಿಗೆ ನೀಡಿದ್ದೇವೆ. ಸರ್ವರಿಗೂ ಮನೆ ನೀಡುವ ಪಿಎಂ ಆವಾಜ್ ಯೋಜನೆ ಮನೆಗೆ ಗ್ಯಾಸ್, ನೀರು ಕೊಡುವ ಯೋಜನೆ ಗರೀಬ್ ಕಲ್ಯಾಣ ಯೋಜನೆ ಮೂಲಕ ರೇಷನ್, ಅನ್ನದ ಯೋಜನೆ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್ ಯೋಜನೆ ಉಚಿತವಾಗಿ ಲಸಿಕೆ ನೀಡುವ ಯೋಜನೆ ಜನಧನ್, ಮುದ್ರಾ ಯೋಜನೆ ಮೂಲಕ ಸಾಲ, ಆರ್ಥಿಕ ಭದ್ರತೆ ಭೀಮಾ, ಜೀವನ ಜ್ಯೋತಿ ,ಅಟಲ್ ಪೆನ್ಷನ್ ಯೋಜನೆ ಸೇರಿ ಹಲವು ಯೋಜನೆ ಸಹೋದರಿಯರಿಗೆ ಕಾನೂನು ಸುರಕ್ಷೆಯ ಯೋಜನೆ ಎಲ್ಲರಿಗೂ ಸಾಮಾಜಿಕ ಭದ್ರತೆ ನೀಡಿದ್ದೇವೆ.

ಎಸ್ಸಿ, ಎಸ್ಟಿ, ಓಬಿಸಿ ಜನರಿಗೆ ಡಬಲ್ ಇಂಜಿನ್ ಸರ್ಕಾರದಿಂದ ಯೋಜನೆ ವಾಜಪೇಯಿ ಸರ್ಕಾರದಲ್ಲಿ ಎಸ್ಟಿ ಸಮುದಾಯಕ್ಕೆ ಸಚಿವಾಲಯ ಕೇಂದ್ರ ಸರ್ಕಾರ ಆದಿವಾಸಿಗಳಿಗೆ ವಿವಿಧ ಯೋಜನೆ ಬಂಜಾರ ಸಮುದಾಯದ ಜನರಿಗೆ ಹಕ್ಕುಪತ್ರ ವಿತರಣೆ ಭೂಮಿ ಇಲ್ಲದವರಿಗೆ ಭೂಮಿ, ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ ಕಾಂಗ್ರೆಸ್ ಆಡಳಿತವನ್ನು ಬಿಜೆಪಿ ಸರ್ಕಾರದ ಅಭಿವೃದ್ಧಿ ಜತೆ ಹೋಲಿಸಲಾಗದು ಬಿಜೆಪಿ ಸರ್ಕಾರದ ಕೇವಲ 9ವರ್ಷದಲ್ಲಿ ಅನೇಕಮೆಡಿಕಲ್ ಕಾಲೇಜು ಕಾಂಗ್ರೆಸ್ ದೀರ್ಫ ಕಾಲದಲ್ಲಿ ಮಾಡಿದ್ದರ ದುಪ್ಪಟ್ಟು ಕಾಲೇಜು ಮೆಡಿಕಲ್ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳ ನಿರ್ಮಾಣ ವಾಗಿದೆ.

ಚಿತ್ರದುರ್ಗದಲ್ಲೂ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗಿದೆ ಮೆಡಿಕಲ್ , ಇಂಜಿನಿಯರ್ ಪರೀಕ್ಷೆಗಳನ್ನು ಸ್ಥಳೀಯ ಭಾಷೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದೇವೆ ರೈತ ವಿದ್ಯಾನಿಧಿ, ಆದಿವಾಸಿಗಳಿಗಾಗಿ ಏಕಲವ್ಯ ಶಾಲೆ ನಿರ್ಮಾಣ ಮಾಡಲಾಗಿದೆ ಕಾಂಗ್ರೆಸ್ ಪಕ್ಷ ಮಕ್ಕಳ ಯುನಿಫಾರ್ಮ್ ನಲ್ಲೂ ಗೋಲ್ ಮಾಲ್ ಮಾಡಿದೆ ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ 1ಕೋಟಿ 25ಲಕ್ಷ ಮೀಸಲು ಮಾರುಕಟ್ಟೆಯಲ್ಲಿ ವಸ್ತು ಖರೀದಿಸುವಾಗ ಗ್ಯಾರಂಟಿ ನೀಡುತ್ತಾರೆ ಗ್ಯಾರಂಟಿಗೆ ಸಮಯ ನಿಗದಿ ಆಗಿರುತ್ತದೆ ಸಮಯ ಮುಗಿದ ಬಳಿಕ ಗ್ಯಾರಂಟಿಗೆ ಬೆಲೆ ಇರಲ್ಲ ಹೀಗಾಗಿ, ಕಾಂಗ್ರೆಸ್ ಪಕ್ಷದ ವಾರೆಂಟಿ ಮುಗಿದು ಹೋಗಿದೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗೆ ಬೆಲೆ ಇಲ್ಲ ಸುಳ್ಳು ಗ್ಯಾರಂಟಿ ನೀಡುವ ಕಾಂಗ್ರೆಸ್ ನ ಇತಿಹಾಸ ದೊಡ್ಡದಿದೆ ಗುಜರಾತ್ ನಲ್ಲಿ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡಿತ್ತು ಮನೆ ನಿರ್ಮಿಸಿ ಕೊಡುತ್ತೀವೆಂದು ಸುಳ್ಳು ಹೇಳಿದ್ದರು.

ಗ್ಯಾರಂಟಿ ಕಾರ್ಡ್ ನೀಡುವಲ್ಲಿಯೂ ಸಹ ಹಣ ಪಡೆದಿದ್ದರು ಗುಜರಾತ್ ನಲ್ಲಿ ಕಾಂಗ್ರೆಸ್ ಈಗ ಬೇರೆ ರಾಜ್ಯದಿಂದ ಜನ ಕರೆಸಬೇಕಿದೆ ಸುಳ್ಳು ಗ್ಯಾರಂಟಿಗೆ ರಾಜ್ಯದ ಜನ ಬೆಲೆ ನೀಡಬಾರದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಗೊತ್ತಿದೆ ಅದಕ್ಕಾಗಿಯೇ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡುತ್ತಿದೆ ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ತರಬೇಕೆಂದರೆ ಎಲ್ಲಾ ಯೋಜನೆ ನಿಲ್ಲಿಸಬೇಕಾಗುತ್ತದೆ ನಿಮ್ಮ ಮಕ್ಕಳ ಭವಿಷ್ಯದ ಹಣ ಕಾಂಗ್ರೆಸ್ ನುಂಗಲಿದೆ ರೈತ ಸಮ್ಮಾನ್ ಯೋಜನೆಯನ್ನು ಬಿಜೆಪಿ ಸರ್ಕಾರ ತಂದಿದೆ ಬಡವರ ಕಲ್ಯಾಣಕ್ಕಾಗಿ ಬಿಜೆಪಿ ಯೋಜನೆ ರೂಪಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಎನ್.ತಿಪ್ಪೇಸ್ವಾಮಿ, ಲಿಂಗಮೂರ್ತಿ, ಅನಿಲ್ ಕುಮಾರ್, ಶೇಖರ್ ನಾಯ್ಕ್ ವಿರೇಶ್ ಅನಿಗವಾಡಿ, ಮುರುಳಿ ಸೇರಿದಂತೆ ಇತರರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ| ನಿರಾಶ್ರಿತರ ಬಾಳಲ್ಲಿ  ಬೆಳಕಾಗಿರುವ ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ.ಪ್ರದೀಪ್

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 22 : ಹಲವು ವರ್ಷಗಳಿಂದ ಸ್ವಯಂಪ್ರೇರಿತವಾಗಿ ತಾಲ್ಲೂಕಿನ ಗೊನೂರುನಲ್ಲಿರುವ ನಿರಾಶ್ರಿತರ  ಪರಿಹಾರ ಕೇಂದ್ರಕ್ಕೆ ಕಾಲಕಾಲಕ್ಕೆ  ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ ಪ್ರದೀಪ್ ಬಿ .ಜಿ, ನೇತ್ರಾಧಿಕಾರಿ  ಕೆ. ಸಿ.ರಾಮು ಹಾಗೂ

ಬಾರೀ ಮಳೆ: ನಾಳೆ ಮತ್ತೆ ಬೆಂಗಳೂರು ಶಾಲೆಗಳಿಗೆ ರಜೆ

  ಬೆಂಗಳೂರು: ಮಳೆರಾಯ ಅದ್ಯಾಕೋ ಏನೋ ಬಿಡುವನ್ನೇ ಕೊಡದಂತೆ ಸುರಿಯುತ್ತಿದ್ದಾನೆ. ಅತ್ತ ಬೆಳೆಯನ್ನ ಕೊಯ್ಲು ಮಾಡುವ ಸಮಯ ಅದು ಆಗ್ತಿಲ್ಲ. ಇತ್ತ ಗಿಡಗಳಿಗೆ ಔಷಧಿ ಹೊಡೆಯುವ ಸಮಯ. ಅದಕ್ಕೂ ಸಮಯ ಸಾಕಾಗುತ್ತಿಲ್ಲ. ಆದರೆ ಮಳೆರಾಯ

ಸಿಪಿ ಯೋಗೀಶ್ವರ್ ಗೆ ಕಾಂಗ್ರೆಸ್ ನಿಂದ ಆಫರ್ ಬಂದಿದ್ಯಾ..? ಸ್ವತಃ ಸಿಪಿವೈ ಹೇಳಿದ್ದೇನು..?

ರಾಮನಗರ: ಚನ್ನಪಟ್ಟಣ ಕ್ಷೇತ್ರ ಸದ್ಯ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಎರಡು ಪಕ್ಷಗಳಿಂದ ಯಾರು ನಿಲ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ಕಾಂಗ್ರೆಸ್ ನಿಂದ ಸಿಪಿ ಯೋಗೀಶ್ವರ್ ಗೆ ಆಫರ್ ಹೋಗಿದೆ ಎನ್ನಲಾಗಿದೆ. ಝ ಎಲ್ಲಾ

error: Content is protected !!