ಪಂಜಾಬ್: ಇಲ್ಲಿನ ಲೂಧಿಯಾನಾದ ಪ್ಯಾಕ್ಟರಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಒಂಭತ್ತು ಜನ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯ ಲೂಧಿಯಾನದಲ್ಲಿ ಭೀಕರ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ದೊಡ್ಡ ದುರಂತವೇ ನಡೆದಿದೆ. ಸದ್ಯ ಈ ಘಟನೆಯಿಂದ 11 ಜನರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು, NDRF ತಂಡ ತಕ್ಷಣವೇ ಭೇಟಿ ನೀಡಿದೆ. ಅಪಾಯಕಾರಿ ಆಕ್ಸಿಜನ್ ಆಗಿರುವ ಕಾರಣ, ರಕ್ಷಣಾ ಸಿಬ್ಬಂದಿಗಳನ್ನು ಮಾಸ್ಕ್ ಧರಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಪಾಯದಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಿದೆ. ಸ್ಥಳದಲ್ಲಿ ವೈದ್ಯರು, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಫ್ಯಾಕ್ಟರಿಯ ಒಳಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ಕಾರಣ, ಗ್ಯಾಸ್ ಸಿಲಿಂಡರ್ ಸೋರಿಕೆಯಾದ ಹಿನ್ನೆಲೆ ಹೊಗೆಯಲ್ಲಿಯಲ್ಲಿಯೇ ಸಿಲುಕಿದ್ದಾರೆ.
9 ಮಂದಿ ಸಾವನ್ನಪ್ಪಿದ್ದು, 11 ಮಂದಿಯನ್ನು ರಕ್ಷಿಸಲಾಗಿದೆ. ಘಟನೆ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂತಾಪ ಸೂಚಿಸಿದ್ದಾರೆ. ಲುಧಿಯಾನದ ಅನಿಲ ಸೋರಿಕೆ ಘಟನೆಯೂ ತುಂಬಾ ದುಃಖಕರವಾಗಿದೆ. ಪೊಲೀಸ್, ಆಡಳಿತ ಮಂಡಳಿ ಮತ್ತು NDRF ತಂಡ ಸ್ಥಳದಲ್ಲಿದೆ. ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗೊಸಲಾಗುವುದು ಎಂದು ತಿಳಿಸಿದ್ದಾರೆ.