ಕಾಮುಕರ ಕಾಟದಿಂದ ಹೆಣ್ಮಕ್ಕಳ ಗೋರಿಗೂ ಹಾಕ್ತಿದ್ದಾರೆ ಬೀಗ..!

ಇಸ್ಲಮಾಬಾದ್ : ಪಾಕಿಸ್ತಾನದಲ್ಲಿ ಸದ್ಯಕ್ಕೆ ಆರ್ಥಿಕ ಬಿಕ್ಕಟ್ಟು, ಆಹಾರ ಬಿಕ್ಕಟ್ಟು ಎದುರಾಗಿರುವುದಲ್ಲದೆ, ಹೆಣ್ಣು ಮಕ್ಕಳಿಗೆ ಆತಂಕವೂ ಹೆಚ್ಚಾಗಿದೆ. ಅದರಲ್ಲೂ ಮೃತದೇಹವನ್ನು ಬಿಡುತ್ತಿಲ್ಲ. ಹೆಣ್ಣು ಮಕ್ಕಳ‌ ಮೃತದೇಹವನ್ನು ಬಿಡದೆ ಅತ್ಯಾಚಾರ ನಡೆಸುತ್ತಿದ್ದಾರೆ. ಹೀಗಾಗಿ ಹೆಣ್ಣು ಮಕ್ಕಳ ಸಮಾಧಿಗೆ ಬೀಗ ಹಾಕುತ್ತಿದ್ದಾರೆ.

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪಾಕಿಸ್ತಾನವೂ ಅಂತಹ ಕಾಮುಕ, ಲೈಂಗಿಕವಾಗಿ ಹತಾಶೆಯುಳ್ಳ ಸಮಾಜವನ್ನು ಸೃಷ್ಟಿಸಿದೆ. ಇದರಿಂದ ತಮ್ಮ ಹೆಣ್ಣು‌ಮಕ್ಕಳ ಶವಗಳು ಅತ್ಯಾಚಾರಕ್ಕೆ ಒಳಗಾಗದಂತೆ ತಡೆಯಲು ಜನ ಅವರ ಗೋರಿಗಳಿಗೆ ಬೀಗ ಹಾಕುತ್ತಿದ್ದಾರೆ ಎಂದು ಸಲ್ತಾನ್ ಟ್ವೀಟ್ ಮಾಡಿದ್ದಾರೆ.

ಕೆಲವು ಕಾಮುಕ ರಾಕ್ಷಸರು ತಮ್ಮ ಕಾಮ ತೃಷೆಯನ್ನು ತಣಿಸಿಕೊಳ್ಳಲು ಹೆಣಗಳನ್ನೂ ಬಿಡುತ್ತಿಲ್ಲ. ಹೀಗಾಗಿ ಮೃತದೇಹಗಳ ಪಾವಿತ್ರ್ಯವನ್ನು ಕಾಪಾಡಲು ಹತಾಶೆಯ ಪ್ರಯತ್ನ ನಡೆಸಲಾಗುತ್ತಿದೆ. ಶವ ಕಾಮದ ಘಟನೆಗಳ ಏರಿಕೆಯನ್ನು ಗಮನಿಸಿದರೆ, ಪ್ರೀತಿ ಪಾತ್ರರನ್ನು ಕಾಪಾಡುವ ಮನವಿಯನ್ನು ಅರ್ಥ ಮಾಡಿಕೊಳ್ಳಬಹುದು, ಆದರೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *