ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಸಮುದಾಯದ ಮತದಾರರನ್ನು ಸೆಳೆಯುವ ಯತ್ನ ಮೂರು ಪಕ್ಷದಿಂದಾನೂ ನಡೆಯುತ್ತಿದೆ. ಇದೀಗ ಬಿಜೆಪಿಯಲ್ಲಿ ತಮಿಳಿಗರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.
ಶಿವಮೊಗ್ಗ ನಗರ ಹಾಗೂ ಭದ್ರಾವತಿ ಕ್ಷೇತ್ರದಲ್ಲಿ ತಮಿಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ತಮಿಉ ಮತದಾರರನ್ನು ಸೆಳೆಯಲು ಕಾರ್ಯಕ್ರಮ ನಡೆಸಿದ್ದಾರೆ. NES ನಲ್ಲಿ ತಮಿಳು ಭಾಷಿಗರು ಸಮಾವೇಶವೊಂದನ್ನು ಆಯೋಜನೆ ಮಾಡಲಾಗಿತ್ತು. ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆ ಹಾಕಿದ್ದರು. ಕೂಲಡೇ ಎಚ್ಚೆತ್ತುಕೊಂಡ ಈಶ್ವರಪ್ಪ ಅವರು ತಮಿಳು ನಾಡಗೀತೆಯನ್ನಜ ನಿಲ್ಲಿಸಿದ್ದಾರೆ. ತಕ್ಷಣ ಅಲ್ಲಿದ್ದ ಜನರಿಗೆ ನಾಡಗೀತೆಯನ್ನು ಹಾಡಲು ಹೇಳಿದ್ದಾರೆ. ಆದರೆ ಯಾರೂ ಕೂಡ ನಾಡಗೀತೆಯನ್ನು ಹಾಡಲು ಮುಂದಾಗಲಿಲ್ಲ. ಆದರೆ ಈಶ್ವರಪ್ಪ ಅವರೇ ನಾಡಗೀತೆಯನ್ನು ಹಾಕಿಸಿದ್ದಾರೆ. ಕರ್ನಾಟಕ, ತಮಿಳುನಾಡಿನ ಪ್ರೀತಿಪಾತ್ರರು ಅಣ್ಣಾಮಲೈ ಅವರಂತೆ ಇರಬೇಕು ಅಂತ ಅಧಿಕಾರಿಗಳು ಬಯಸುತ್ತಾರೆ. ಒಂದೂ ಕ್ಷೇತ್ರ ಇಲ್ಲದ ತಮಿಳುನಾಡಿನಲ್ಲಿ ನಾಲ್ಕು ಬಿಜೆಪಿ ಶಾಸಕರು ಆಗಲು ಅಣ್ಣಾಮಲೈ ಕಾರಣ. ಇದು ಕನ್ನಡ – ತಮಿಳು ಸಂಗಮ ಎಂದಿದ್ದಾರೆ.