ಬೆಂಗಳೂರು – ಮೈಸೂರು ಹೈವೆ ಈಗ ಸಂಚಾರಕ್ಕೆ ಮುಕ್ತವಾಗಿದೆ. ಈ ಮೂಲಕ ಕಡಿಮೆ ಸಮಯದಲ್ಲಿಯೇ ಮೈಸೂರನ್ನು ತಲುಪಬಹುದಾಗಿದೆ. ಆದ್ರೆ ಇನ್ನು ಕೆಲವೇ ದಿನಗಳಲ್ಲಿ ನಿಧಾನಗತಿಯಲ್ಲಿ ಚಲಿಸುವ ವಾಹನಗಳನ್ನು ಈ ಹೈವೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಹೈಸ್ಪೀಡ್ ಕಮ್ಯುಟ್ ಕಾರಿಡಾರ್ ನಲ್ಲಿ ನಿಧಾನವಾಗಿ ಚಲಿಸುವ ವಾಹನಗಳು ಅಪಾಯವನ್ನುಂಟು ಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ನಿಧಾನವಾಗಿ ಚಲಿಸುವ ವಾಹನಗಳನ್ನು ನಿಷೇಧಿಸಲು ತೀರ್ಮಾನ ಮಾಡಲಾಗಿದೆ. ಬೈಕುಗಳು, ಟ್ರ್ಯಾಕ್ಟರ್ ಗಳು, ಆಟೋಗಳು ಮತ್ತು ಇತರೆ ವಾಹನಗಳನ್ನು ಸಾಮಾನ್ಯವಾಗಿ ಪ್ರವೇಶ ನಿಯಂತ್ರಿತ ಹೆದ್ದಾರಿಗಳಲ್ಲಿ ಪ್ರವೇಶಿಸಲು ಅನುಮತಿ ಸಿಗುವುದಿಲ್ಲ. ಹೆಚ್ಚಿನ ವೇಗದ ಪ್ಯಾಣದ ಉದ್ದೇಶದಿಂದ ಇವುಗಳನ್ನು ನಿಷೇಧಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.
ಇದೇ ವಿಚಾರಕ್ಕೆ ಕೆಲ ತಿಂಗಳ ಹಿಂದೆ ವಿರೋಧ ವ್ಯಕ್ತವಾಗಿತ್ತು. ಆದರೂ ಪ್ರಾಧಿಕಾರ ತಲೆಕೆಡಿಸಿಕೊಳ್ಳದೆ ನಿಯಮವನ್ನು ಜಾರಿಗೊಳಿಸಿತ್ತು. ಆದರೆ ಈಗ ಆ ತಪ್ಪನ್ನು ಸರಿ ಮಾಡಿಕೊಳ್ಳುವ ಯೋಜನೆಯಲ್ಲಿದೆ. ಬೆಂಗಳೂರು – ಮೈಸೂರು ದಶಪಥ ರಸ್ತೆ ಆರಂಭವಾದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಸಿಲುಕುತ್ತಲೆ ಇದೆ.