ಚಿತ್ರದುರ್ಗ,(ಏ.27) : 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.65.57 ಫಲಿತಾಂಶ ಲಭಿಸಿದೆ.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 793 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇರದಲ್ಲಿ 25 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, 187 ವಿದ್ಯಾರ್ಥಿಗಳು ಪ್ರಥಮ ದರ್ಜೆ, 242 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 162 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗ: ಕಲಾವಿಭಾಗದ ವಿದ್ಯಾರ್ಥಿಗಳಾದ ಹೆಚ್. ಭವ್ಯ 570 (95%), ಎಸ್.ಮಹಾಲಕ್ಷ್ಮೀ 556 (92.67%), ಜಿ.ಡಿ ರಕ್ಷಿತಾ 555 (92.05%) ಗಳಿಸಿದ್ದಾರೆ.
ವಿಜ್ಞಾನ ವಿಭಾಗ: ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಯು. ಚಿನ್ಮಯಾ 547 (92.17%), ಪ್ರವಲಿಕಾ 547 (91.17%), ಸಿ.ಎಂ ಅಮೃತಾ 520 (86.67%) ಗಳಿಸಿದ್ದಾರೆ.
ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಎನ್.ಎಂ.ಶಿವಶ್ರೀ 552 (92%), ಕೆ.ಎಸ್.ಚೈತ್ರಾ 550 (91.67%), ಪೂಜಾಶ್ರೀ ಎಸ್ ವಾಯ್ 532 (88.67%) ಗಳಿಸಿದ್ದಾರೆ.
ಸಮಾಜಶಾಸ್ತ್ರದಲ್ಲಿ ಮೂವರು ವಿದ್ಯಾರ್ಥಿಗಳು 100ಕ್ಕೆ 100, ಕನ್ನಡ ವಿಷಯದಲ್ಲಿ ಮೂವರು ವಿದ್ಯಾರ್ಥಿಗಳು 100ಕ್ಕೆ 100, ಸಂಸ್ಕøತ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100, ಗಣಕ ಯಂತ್ರ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100, ಸಂಖ್ಯಾಶಾಸ್ತ್ರ ವಿಷಯದಲ್ಲಿ ಒರ್ವ ವಿದ್ಯಾರ್ಥಿಯು 100ಕ್ಕೆ 100ರಷ್ಟು ಹಾಗೂ ಇತಿಹಾಸ ವಿಷಯದಲ್ಲಿ ಒರ್ವ ವಿದ್ಯಾರ್ಥಿಯು 100ಕ್ಕೆ 100 ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ನಾಗರಾಜ್ ತಿಳಿಸಿದ್ದಾರೆ.