ಬೆಂಗಳೂರು: ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ರಾಜಕಾರಣಿಗಳು ಪ್ರಚಾರದ ವೇಳೆ ವಿರೋಧ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುವುದಾಗಲೀ, ಅವರ ವಿರುದ್ಧ ಕಿಡಿಕಾರುವುದು ಸಹಜ. ಅಂಥದ್ದೇ ಒಂದು ಹೇಳಿಕೆಯಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಚಾಮರಾಜನಗರ ಹಾಗೂ ವರುಣಾ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ದೂರು ದಾಖಲಾಗಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೂರನ್ನು ನೀಡಿದ್ದಾರೆ. ಹೈಗ್ರೌಂಡ್ ಪೊಲೀಸ್ ಠಾಣೆಗೆ ಅಮಿತ್ ಶಾ ಹಾಗೂ ವಿ ಸೋಮಣ್ಣ ಅವರ ವಿರುದ್ಧ ದೂರು ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗಲಾಟೆ ಆಗುತ್ತೆ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ದೂರು ದಾಖಲಾಗಿದೆ.
ಜನರನ್ನು ಧಿಕ್ಕು ತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ. ಅಮಿತ್ ಶಾ ಅವರ ಮಾತು ಸತ್ಯಕ್ಕೆ ದೂರವಾದಂತ ಮಾತು ಎಂದು ಸುರ್ಜೆವಾಲ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಇರುವ ಕ್ಷೇತ್ರದಲ್ಲಿ ಯಾವ ಗಲಾಟೆಯೂ ಆಗುತ್ತಿಲ್ಲವಾ ಎಂದು ಕಾಂಗ್ರೆಸ್ ನವರು ಪ್ರಶ್ನಿಸಿದ್ದಾರೆ.