ಬೆಂಗಳೂರು: 2023ರ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ಈ ಬಾರಿ ಮೂರು ಪಕ್ಷಗಳು ಅಧಿಕಾರಕ್ಕಾಗಿ ಗುದ್ದಾಟ ನಡೆಸುತ್ತಿವೆ. ಅದಕ್ಕೆಂದೆ ಸಾಕಷ್ಟು ತಯಾರಿ, ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಇದರ ನಡುವೆ ಜನರ ಒಲವು ಯಾರ ಕಡೆಗೆ ಎಂಬುದನ್ನು ಒಂದಷ್ಟು ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಅದರಲ್ಲಿ ಸೀ ವೋಟರ್ ಕೂಡ ಒಂದು.
ಸೀವೋಟರ್ ತಾನು ನಡೆಸಿದ ಸಮೀಕ್ಷೆಯನ್ನು ಬಿಟ್ಟಿದ್ದು, ಅದರಲ್ಲಿ ಈ ಬಾರಿ ಜನ ಕಾಂಗ್ರೆಸ್ ಕಡೆಗೆ ಒಲವು ತೋರಿಸಿದ್ದಾರೆ. ಸೀವೋಟರ್ ನ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪರ ಬೆಂಬಲ ಸಿಕ್ಕಿದೆ.
ಚುನಾವಣೆ ಬಂದಾಗೆಲ್ಲಾ ಸೀವೋಟರ್ ತನ್ನ ಸಮೀಕ್ಷಾ ವರದಿಯನ್ನು ರಿಲೀಸ್ ಮಾಡುತ್ತೆ. ಕೆಲವೊಮ್ಮೆ ಅದು ವರದಿಗೆ ಕೊಂಚ ಹತ್ತಿರವಾಗಿರುತ್ತೆ. ಇನ್ನೊಮ್ಮೆ ಸತ್ಯವಾಗಿದೆ. ಅಂದ್ರೆ 2018 ರಲ್ಲಿ ಸೀ ವೋಟರ್ ನೀಡಿದ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 10, ಬಿಜೆಪಿ 96, ಜೆಡಿಎಸ್ 25 ಎಂಬುದಾಗಿತ್ತು. ಆದರೆ ಕಾಂಗ್ರೆಸ್ 80 ಕ್ಷೇತ್ರ ಪಡೆದು ಬಿಜೆಪಿ, 104 ಪಡೆದಿತ್ತು. 37 ಕ್ಷೇತ್ರ ಪಡೆದ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ಸ್ಥಾಪಿಸಿತ್ತು. 2013ರಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದಿದ್ದತು. ಅದರಂತೆ ಆಗಿತ್ತು. ಈ ಬಾರೊಯ ಚುನಾವಣೆಯಲ್ಲಿ ಏನಾಗಬಹುದು ಎಂಬ ಕುತೂಹಲವೂ ಇದೆ.