ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ

suddionenews
4 Min Read

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ.ಏ.26  ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ಜರುಗಲಿದೆ.

ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಕಣದಲ್ಲಿ ಉಳಿದ 76 ಅಭ್ಯರ್ಥಿಗಳ ಪೈಕಿ, ಮಾನ್ಯತೆ ಪಡೆದ ರಾಷ್ಟ್ರೀಯ, ರಾಜ್ಯ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಉಳಿದ ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಎನ್.ವೈ.ಗೋಪಾಲಕೃಷ್ಣ ಕೈ,
ಭಾರತೀಯ ಜನತಾ ಪಕ್ಷದ ಎಸ್.ತಿಪ್ಪೇಸ್ವಾಮಿ ಕಮಲ, ಬಹುಜನ ಸಮಾಜವಾದಿ ಪಕ್ಷದ ಎಮ್.ಓ. ಮಂಜುನಾಥ ಸ್ವಾಮಿ ನಾಯಕ ಆನೆ, ಜಾತ್ಯಾತೀತ ಜನತಾ ದಳದ ವೀರಭದ್ರಪ್ಪ ತಲೆಯ ಮೇಲೆ ಭತ್ತದ ಹೊರೆ ಹೊತ್ತ ಮಹಿಳೆ, ಆಮ್ ಆದ್ಮಿ ಪಕ್ಷದ ಎಸ್.ಟಿ.ಹರೀಶ್ ನಾಯಕ ಪೊರಕೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಲ್ಲಿಕಾರ್ಜುನ ಬ್ಯಾಟರಿ ಟಾರ್ಚ್, ಪಕ್ಷೇತರ ಅಭ್ಯರ್ಥಿಗಳಾದ ಓ.ಗೋವಿಂದ ಗಾಜಿನ ಲೋಟ, ಎನ್.ಮಲ್ಲಯ್ಯ ಸ್ವಾಮಿ ವಜ್ರ, ಟಿ.ಶಶಿಕುಮಾರ್ ಚಿಮಣಿ ಹಾಗೂ ಕೆ.ಪಿ.ಹರೀಶ್ ಕುಮಾರ್ ಕಬ್ಬು ರೈತ ಚಿಹ್ನೆಯಡಿ ಸ್ಪರ್ಧಿಸುವರು.

ಚಳ್ಳಕೆರೆ ವಿಧಾನ ಕ್ಷೇತ್ರದಲ್ಲಿ ಅಂತಿಮವಾಗಿ 7 ಅಭ್ಯರ್ಥಿಗಳು ಕಣದಲ್ಲಿದ್ದು ಭಾರತೀಯ ಜನತಾ ಪಕ್ಷದ ಅನಿಲ್ ಕುಮಾರ್.ಆರ್ ಕಮಲ, ಆಮ್ ಆದ್ಮಿ ಪಕ್ಷದ ಮಾರಕ್ಕ ಪೊರಕೆ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಟಿ.ರಘುಮೂರ್ತಿ ಕೈ, ಜಾತ್ಯಾತೀತ ಜನತಾ ದಳದ ರವೀಶ್‍ಕುಮಾರ್.ಎಂ ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಭೂಜರಾಜ.ಸಿ ಬ್ಯಾಟರಿ ಟಾರ್ಚ್, ಪಕ್ಷೇತರ ಅಭ್ಯರ್ಥಿಗಳಾದ ಅಂಜಮ್ಮ ಆಟೋ-ರಿಕ್ಷಾ, ಕೆ.ಟಿ.ಕುಮಾರಸ್ವಾಮಿ ತೆಂಗಿನ ತೋಟ ಚಿಹ್ನೆಯಡಿ ಸ್ಪರ್ಧಿಸುವರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದ ಬಿ.ಈ.ಜಗದೀಶ್ ಪೊರಕೆ, ಭಾರತೀಯ ಜನತಾ ಪಕ್ಷದ ಜಿ.ಹೆಚ್.ತಿಪ್ಪಾರೆಡ್ಡಿ ಕಮಲ,  ಬಹುಜನ ಸಮಾಜ ಪಕ್ಷದ ಪ್ರಕಾಶ್.ಎನ್ ಆನೆ, ಜಾತ್ಯಾತೀತ ಜನತಾ ದಳದ ಜಿ.ರಘು ಆಚಾರ್ ತೆಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕೆ.ಸಿ.ವೀರೇಂದ್ರ ಪಪ್ಪಿ ಕೈ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಟಿ.ಚಂದ್ರಣ್ಣ ಬ್ಯಾಟರಿ ಚಾರ್ಚ್, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷದ ಜಿ.ಎಸ್.ನಾಗರಾಜು ಟಿಲ್ಲರ್, ಸಮಾಜವಾದಿ ಪಕ್ಷದ ಎನ್.ಮಂಜಪ್ಪ ಬೈಸಿಕಲ್, ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ವಿಜಯ ಕಹಳೆ ಊದುತ್ತಿರುವ ಮನುಷ್ಯ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಬಾಳೇಕಾಯಿ ಶ್ರೀನಿವಾಸ.ಹೆಚ್ ಆಟೋರಿಕ್ಷಾ, ಪಕ್ಷೇತರ ಅಭ್ಯರ್ಥಿಗಳಾದ ಗಣೇಶ್ ನಾಗರೀಕ, ಆರ್.ಗೋಪಿನಾಥ್ ಹೊಲಿಗೆ ಯಂತ್ರ, ಜಿ.ಚಿತ್ರಶೇಖರಪ್ಪ ಟ್ರಕ್, ಪಿ.ಎಸ್.ಪುಟ್ಟಸ್ವಾಮಿ(ಸ್ವಾಮಿ) ಸಿಸಿಟಿವಿ ಕ್ಯಾಮರಾ, ಎಂ.ಎ.ಬಸವರಾಜು ಕಬ್ಬು ರೈತ, ಭೂತರಾಜ.ವಿ.ಎಸ್ ದೂರವಾಣಿ, ಮೋಹನ್ ಕಮಾರ್.ಆರ್ ಹಲಸಿನಹಣ್ಣು, ಎಂ.ಹೆಚ್.ಶಶಿಧರ್ ಪುಟ್‍ಬಾಲ್, ಸುರೇಶ್.ಎನ್ ಹೆಲಿಕಾಪಟ್ಟರ್, ಸೌಭಾಗ್ಯ ಬಸವರಾಜನ್ ತೆಂಗಿನ ತೋಟ, ಡಾ.ಹೆಚ್.ಕೆ.ಎಸ್.ಸ್ವಾಮಿ ಮೈಕ್  ಚಿಹ್ನೆಯಡಿ ಸ್ಪರ್ಧಿಸುವರು.

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದ ಕೆ.ಟಿ.ತಿಪ್ಪೇಸ್ವಾಮಿ ಪೊರಕೆ, ಭಾರತೀಯ ಜನತಾ ಪಕ್ಷದ ಕೆ.ಪೂರ್ಣಿಮಾ ಕಮಲ, ಜಾತ್ಯಾತೀತ ಜನತಾದಳ ಎಂ.ರವೀಂದ್ರಪ್ಪ ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ, ಬಹುಜನ ಸಮಾಜ ಪಕ್ಷದ ಎನ್.ರಂಗಸ್ವಾಮಿ ಆನೆ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಡಿ.ಸುಧಾಕರ್ ಕೈ, ಉತ್ತಮ ಪ್ರಜಾಕೀಯ ಪಕ್ಷದ ಈ.ಪಾತಲಿಂಗಪ್ಪ ಆಟೋ-ರಿಕ್ಷಾ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠವಾಲೆ) ಪಕ್ಷದ ಬಿ.ಪುಟ್ಟಲಿಂಗಪ್ಪ ಕಬ್ಬು ರೈತ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಹೆಚ್.ಮಹೇಶ್ ಪುಟ್ಬಾಲ್, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ವಿನಯ್.ಎಸ್ ಬ್ಯಾಟರಿ ಟಾರ್ಚ್, ಪಕ್ಷೇತರ ಅಭ್ಯರ್ಥಿಗಳಾದ ರಂಗಯ್ಯ.ಎನ್ ತೆಂಗಿನ ತೋಟ, ಎನ್.ಓ.ರಂಗಸ್ವಾಮಿ ಹಡಗು, ಬಿ.ಶಶಿಕಲ ರೋಡ್ ರೋಲರ್ ಚಿಹ್ನೆಯಡಿ ಸ್ಪರ್ಧಿಸುವರು.

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಬಿ.ಜಿ.ಗೋವಿಂದಪ್ಪ ಕೈ, ಜಾತ್ಯಾತೀತ ಜನತಾ ದಳದ ತಿಪ್ಪೇಸ್ವಾಮಿ.ಎಂ ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ, ಬಹುಜನ ಸಮಾಜ ಪಕ್ಷದ ತಿಮ್ಮಪ್ಪ.ಕೆ ಆನೆ, ಆಮ್ ಆದ್ಮಿ ಪಕ್ಷದ ರಾಜು.ಎನ್.ವಿ ಪೊರಕೆ, ಭಾರತೀಯ ಜತನಾ ಪಕ್ಷದ ಎಸ್.ಲಿಂಗಮೂರ್ತಿ ಕಮಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆ.ಆರ್.ಎಸ್ ತನು ಚಿಕ್ಕಣ ಯಾದವ್ ಬ್ಯಾಟರಿ ಟಾರ್ಚ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಕುಮಾರ್ ಎಸ್ ತುಂಬಿನಕೆರೆ ಆಟೋ-ರಿಕ್ಷಾ, ಪಕ್ಷೇತರ ಅಭ್ಯರ್ಥಿಗಳಾದ ಬಿ.ಗೀತಾಂಜಲಿ ಸೀಟಿ(ವ್ಹಿಸಲ್), ಗೂಳಿಹಟ್ಟಿ ಡಿ ಶೇಖರ್ ಹಣ್ಣುಗಳು ಇರುವ ಬ್ಯಾಸ್ಕೆಟ್, ಡಿ.ಪಾಂಡುರಂಗ ಗರಗ್ ಕೈಗಾಡಿ, ಟಿ.ಮಂಜುನಾಥ ತಂಗಿನ ತೋಟ, ಶೇಖರ್ ನಾಯ್ಕ್.ಎಂ.ಆರ್ ವಜ್ರ., ಎಂ.ಎಸ್.ಸತೀಶ ಜಂಗಮ ನಾಗರೀಕ ಚಿಹ್ನೆಯಡಿ ಸ್ಪರ್ಧಿಸುವರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಹೆಚ್.ಆಂಜನೇಯ ಕೈ, ಜಾತ್ಯಾತೀತ ಜನತಾ ದಳದ ಎಸ್.ಆರ್.ಇಂದ್ರಜೀತ್ ನಾಯ್ಕ್ ತಲೆಯ ಮೇಲೆ ಭತ್ತದ ಹೊರೆ ಹೊತ್ತ ರೈತ ಮಹಿಳೆ, ಭಾರತೀಯ ಜನತಾ ಪಕ್ಷದ ಎಂ.ಚಂದ್ರಪ್ಪ ಕಮಲ, ಬಹುಜನ ಸಮಾಜ ಪಕ್ಷದ ಕೆ.ಎನ್.ದೊಡ್ಡಟ್ಟೆಪ್ಪ ಆನೆ, ಆಮ್ ಆದ್ಮಿ ಪಕ್ಷದ ಮಾಹಂತೇಶ್.ಸಿ.ಯು ಪೊರಕೆ, ಸಮಾಜವಾದಿ ಪಕ್ಷದ ಪಿ.ಎಸ್.ಜಯಪ್ಪ ಬೈಸಿಕಲ್, ಜೈ ಮಹಾಭಾರತ್ ಪಕ್ಷದ ಪ್ರಕಾಶ್.ಹೆಚ್ ಕೊಳಲು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಎಸ್.ರಘುವೀರ ವರ್ಮಾ ಬ್ಯಾಟರಿ ಟಾರ್ಚ್, ಉತ್ತಮ ಪ್ರಜಾಕೀಯ ಪಕ್ಷದ ರಾಜು.ಈ ಆಟೋ-ರಿಕ್ಷಾ, ಪಕ್ಷೇತರರಾದ ಡಾ.ಎಲ್.ಜಯಸಿಂಹ ತಂಗಿನ ತೋಟ, ಮಹೇಶ್ ಕುಮಾರ್.ಎಂ.ಪಿ ಲ್ಯಾಪ್ ಟಾಪ್, ಮಂಜುನಾಥ ಸ್ವಾಮಿ.ಟಿ ವಜ್ರ, ಹನುಮತಪ್ಪ.ಡಿ ಹೆಲಿಕಾಪ್ಟರ್ ಚಿಹ್ನೆಯಡಿ ಸ್ಪರ್ಧಿಸುವರು.

Share This Article
Leave a Comment

Leave a Reply

Your email address will not be published. Required fields are marked *