ಸಿದ್ದರಾಮಯ್ಯರನ್ನು ಸೋಲಿಸಲು RSS ನವರನ್ನು ಉತ್ತರ ಪ್ರದೇಶ, ಬಿಹಾರದಿಂದ ಕರೆಸೀತಾ ಬಿಜೆಪಿ..?

1 Min Read

 

ಮೈಸೂರು: ವರುಣಾ ಕ್ಷೇತ್ರವನ್ನು ಗೆಲ್ಲಬೇಕೆಂದು ಬಿಜೆಪಿ ಶತಾಯಗತಯ ಪ್ರಯತ್ನ ನಡೆಸುತ್ತಿದೆ. ವರುಣಾ ಕ್ಷೇತ್ರ ಹೇಳಿ ಕೇಳಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಇರುವಂತ ಕ್ಷೇತ್ರ. ಇಲ್ಲಿ ವಿ ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕೆ ಇಳಿಸಲಾಗಿದೆ. ಹೀಗಾಗಿ ಸೋಮಣ್ಣ ಅವರ ಗೆಲುವಿಗಾಗಿ ಬಿಜೆಪಿ RSS ಸಂಘದವರನ್ನು ಕರೆಸಲಾಗಿದೆ.

ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಒಟ್ಟು 200 ಆರ್ ಎಸ್ ಎಸ್ ಸಂಘಟನೆಯವರನ್ನು ಕರೆಸಲಾಗಿದೆಯಂತೆ. ಅದರಲ್ಲೂ ಯೋಗಿ ಆದಿತ್ಯನಾಥ್ ಗೆಲುವಿಗೆ ಕಾರಣಕರ್ತರಾದವರನ್ನೇ ಇಲ್ಲಿಗೂ ಪ್ರಚಾರಕ್ಕೆ ಕರೆಸಲಾಗಿದೆಯಂತೆ. ಬೇರೆ ರಾಜ್ಯದಿಂದ ಬಂದವರು ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಪ್ರಚಾರ ಮಾಡಲಿದ್ದಾರೆ.

ವರುಣಾ ಕ್ಷೇತ್ರದ ಮೇಲೆ ಬಿ ಎಲ್ ಸಂತೋಷ್ ಗಮನ ಹರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದುಕೊಂಡಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ವರುಣಾದ ಮೇಲೆ ಆತ್ಮವಿಶ್ವಾಸವಿಟ್ಟಿದೆ. ಸಿದ್ದರಾಮಯ್ಯ ಅವರ ಮಗ ರಾಕೇಶ್ ಅವರ ಮಗ ಕೂಡ ಈ ಬಾರಿ ತಾತನ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಇನ್ನು ಯತೀಂದ್ರ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *