ನಾವೇ ಗೆದ್ವಿ ಅಂತ ಮೊಂಡುತನ ಮಾಡಬಾರದು : ಸುಮಲತಾಗೆ ಕೈ ಅಭ್ಯರ್ಥಿಯ ಮನವಿ

suddionenews
1 Min Read

ಮಂಡ್ಯ: ಸಂಸದೆ ಸುಮಲತಾ ಸದ್ಯ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸುಮಲತಾ ಅವರ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ದುಡಿದಿದ್ದಾರೆ. ಆದ್ರೆ ಸುಮಲತಾ ಬಿಜೆಪಿಗೆ ಸೇರಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಸರಿ ಎನಿಸಿಲ್ಲ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಸುಮಲತಾ ಅವರಿಗೆ ಹಳೆಯದ್ದನ್ನು ನೆನಪಿಸಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರೋ ರವಿ ಗಾಣಿಗ, “ನಿಮ್ಮನ್ನು ಗೆಲ್ಲಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು. ಬಿಜೆಪಿ ಸೇರಿದ್ದೀನಿ ಅಂತ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಾರ್ಯಕರ್ತರನ್ನು ಮರೆಯಬೇಡಿ. ಸುಮಲತಾ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರ ಋಣ ತೀರಿಸುವ ಅವಕಾಶವಿದೆ. ಅದನ್ನು ಬಿಟ್ಟು ನಾವೇ ಗೆದ್ವಿ ಅಂತ ಮೊಂಡುತನ ತೋರಬಾರದು.

ನೀವೂ ಎಲೆಕ್ಷನ್ ನಿಂತಾಗ ಎಷ್ಟೋ ಕಾರ್ಯಕರ್ತರು ಸಸ್ಪೆಂಡ್ ಆದ್ರೂ. ನೀವೂ ಅವರ ಕೈ ಹಿಡಿಯಲೇ ಇಲ್ಲ. ಆದರೆ ಈಗ ಕಾಂಗ್ರೆಸ್ ಕಾರ್ಯಕರ್ತರು ಕಷ್ಟದಲ್ಲಿದ್ದಾರೆ. ನೀವೂ ಅವರಿಗೆ ಸಹಾಯ ಮಾಡಿ” ಎಂದಿದ್ದಾರೆ. ಇನ್ನು ಮಂಡ್ಯದ ಚುನಾವಣಾ ಪ್ರಚಾರದಲ್ಲಿ ನಟಿ ರಮ್ಯಾ ಭಾಗಿಯಾಗಲಿದ್ದಾರೆ. ಮೇ 1 & 2 ರಂದು ನಟಿ ರಮ್ಯಾ, ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks