ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಏ.22) : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ವಿವಿಧ ಚಕ್ ಪೊಸ್ಟ್, ಫ್ಲೈಯಿಂಗ್ ಸ್ಕ್ವಾಡ್, ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಅನಧಿಕೃತವಾಗಿ ಸಾಗಿಸುತ್ತಿದ್ದ ಬಾರಿ ಪ್ರಮಾಣದ ಮದ್ಯ, ಹಣ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ 29 ರಿಂದ ಏಪ್ರಿಲ್ 22 ರವರೆಗೆ ರೂ.94,77,470 ಮೌಲ್ಯದ ಮದ್ಯ, ರೂ.84,18,490 ಮೌಲ್ಯದ ಚಿನ್ನಾಭರಣ ಹಾಗೂ ರೂ.64,31,290 ಹಣ ವಶಪಡಿಸಿಕೊಳ್ಳಾಗಿದೆ.
ಫ್ಲೈಯಿಂಗ್ ಸ್ಕ್ವಾಡ್ ತಂಡದಿಂದ ರೂ.50,61,290 ವಶಪಡಿಸಿಕೊಳ್ಳಲಾದ್ದು ಇದರಲ್ಲಿ ಪರಿಶೀಲನೆ ಬಳಿಕ ಸೂಕ್ತ ದಾಖಲೆಯುಳ್ಳ ರೂ.20,17,160 ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಸ್ಥಾನಿಕ ತನಿಖಾ ತಂಡಗಳಿಂದ ವಶಪಡಿಸಿಕೊಳ್ಳಲಾದ ರೂ. 13,70,000 ರಲ್ಲಿ ಪರಿಶೀಲನೆ ಬಳಿಕ ರೂ.7,00,000 ವಾರಸುದಾರರಿಗೆ ಹಿಂದುರಿಗಿಸಲಾಗಿದೆ.
ಅಬಕಾರಿ ಇಲಾಖೆಯಿಂದ ರೂ.94,77,470 ಮೌಲ್ಯದ 40,121 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ರೂ.84,18,490 ಮೌಲ್ಯದ 2,740 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಚೆಕ್‌ಪೋಸ್ಟ್‌ಗಳಲ್ಲಿ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳು ಇನ್ನಷ್ಟೂ ಸರಿಯಾಗಿ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ಅಕ್ರಮ ಹಣ, ಮದ್ಯ ಸಾಗಾಟ ಹಾಗೂ ಅವುಗಳ ಹಂಚುವಿಕೆ ತಡೆಗೆ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದುವರೆಗೂ ಚುನಾವಣೆ ವೆಚ್ಚ ಸಂಬಂಧಿ 2 ಪ್ರಕರಣ, ಅಬಕಾರಿ ನಿಯಮ ಉಲಂಘನೆ ಅಡಿ 62 ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಹಣ ಸಾಗಟ, ಹಂಚಿಕೆ ಹಾಗೂ ಲಂಚದ 3 ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‌ಜೆ ಮಾಹಿತಿ ನೀಡಿದ್ದಾರೆ.