ಚಿತ್ರದುರ್ಗ ಜಿಲ್ಲೆಯ ಚುನಾವಣಾ ಸಂಬಂಧಿತ ದೂರುಗಳಿಗೆ ಅಧಿಕಾರಿಗಳ ನೇಮಕ : ಕಛೇರಿ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗಳ ವಿವರ

2 Min Read

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಏ.20) : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ, ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ಭಾರತ ಚುನಾವಣಾ ಆಯೋಗ ನಿಯೋಜಿಸಿದೆ.

ಈ ಅಧಿಕಾರಿಗಳು ಈಗಾಗಲೇ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ್ದು, ಚುನಾವಣಾ ಸಂಬಂಧಿತ ದೂರುಗಳಿಗೆ ಅಧಿಕಾರಿಗಳನ್ನು ಸಂರ್ಪಕಿಸಬಹುದಾಗಿದ್ದು, ಕಛೇರಿ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ.

ಸಾಮಾನ್ಯ ವೀಕ್ಷಕರ ವಿವರ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಗೆ ಮೂವರು ಐಎಎಸ್ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರಾಗಿ ಚುನಾವಣಾ ಆಯೋಗ ನಿಯೋಜಿಸಿದ್ದು, ಮೊಳಕಾಲ್ಮುರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ರಾಗುಲ್ ಕೆ, ಪರೀವೀಕ್ಷಣಾ ಮಂದಿರ, ಚಳ್ಳಕೆರೆ, ದೂರವಾಣಿ ಸಂಖ್ಯೆ 8073991789ಗೆ ಸಂಪರ್ಕಿಸಬಹುದು.

ಚಿತ್ರದುರ್ಗ ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಸನೋಜ್ ಕುಮಾರ್ ಝಾ, ಪರೀವೀಕ್ಷಣಾ ಮಂದಿರ, ಚಿತ್ರದುರ್ಗ,  ದೂರವಾಣಿ ಸಂಖ್ಯೆ 7975637915 ಗೆ ಸಂಪರ್ಕಿಸಬಹುದು. ಹೊಸದುರ್ಗ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ರಾಜೀವ್ ಪ್ರಶಾರ್, ಪರೀವೀಕ್ಷಣಾ ಮಂದಿರ, ಹೊಸದುರ್ಗ, ದೂರವಾಣಿ ಸಂಖ್ಯೆ 7975622142 ಗೆ ಸಂಪರ್ಕಿಸಬಹುದು.
ವೆಚ್ಚ ವೀಕ್ಷಕರ ವಿವರ: ಜಿಲ್ಲೆಗೆ ಮೂವರು ಐಆರ್‍ಎಸ್ ಅಧಿಕಾರಿಗಳನ್ನು ಚುನಾವಣಾ ವೆಚ್ಚ ವೀಕ್ಷಕರಾಗಿ ನಿಯೋಜಿಸಲಾಗಿದೆ. ಮೊಳಕಾಲ್ಮುರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ನಿಧಿನ್ ಲಾಲ್ ಇ.ಎಸ್, ಪರಿವೀಕ್ಷಣಾ ಮಂದಿರ, ಚಳ್ಳಕೆರೆ, ದೂರವಾಣಿ ಸಂಖ್ಯೆ 6360443121ಗೆ ಸಂಪರ್ಕಿಸಬಹುದು. ಚಿತ್ರದುರ್ಗ ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಪ್ರತೀಕ್ ಕುಮಾರ್ ಮಿಶ್ರಾ, ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ, ಚಿತ್ರದುರ್ಗ, ದೂರವಾಣಿ ಸಂಖ್ಯೆ 6360497561 ಗೆ ಸಂಪರ್ಕಿಸಬಹುದು. ಹಿರಿಯೂರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಕ್ಕೆ ಅರವಿಂದ್ ಪಿ ಬನ್ಸೋಡೆ, ಪರೀವೀಕ್ಷಣಾ ಮಂದಿರ, ಹೊಸದುರ್ಗ, ದೂರವಾಣಿ ಸಂಖ್ಯೆ 8618340690 ಗೆ ಸಂಪರ್ಕಿಸಬಹುದು.
ಪೊಲೀಸ್ ವೀಕ್ಷಕರ ವಿವರ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಒರ್ವ ಐಪಿಎಸ್ ಅಧಿಕಾರಿಯನ್ನು ಪೊಲೀಸ್ ವೀಕ್ಷಕರಾಗಿ ನಿಯೋಜಿಸಲಾಗಿದೆ. ಪೊಲೀಸ್ ವೀಕ್ಷಕರಾಗಿ ಗೌರವ್ ಸಿಂಗ್, ಪರಿವೀಕ್ಷಣಾ ಮಂದಿರ, ಚಿತ್ರದುರ್ಗ, ದೂರವಾಣಿ ಸಂಖ್ಯೆ 7892862756 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *