ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಹಿರಿಯೂರು : 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಏಪ್ರಿಲ್ 20 ರಂದು ಹಿರಿಯೂರು ಮತಕ್ಷೇತ್ರದಲ್ಲಿ 5 ನಾಮಪತ್ರ ಸಲ್ಲಿಕೆಯಾಗಿವೆ.
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಸುಧಾಕರ್.ಡಿ, ಜ್ಯಾತ್ಯಾತೀತ ಜನತಾ ದಳದಿಂದ ಎಂ.ರವೀಂದ್ರಪ್ಪ, ಉತ್ತಮ ಪ್ರಜಾಕೀಯ ಪಕ್ಷದಿಂದ ಆರ್.ಧನು, ಆಮ್ ಆದ್ಮಿ ಪಕ್ಷದಿಂದ ಕೆ.ಟಿ.ತಿಪ್ಪೇಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎನ್.ಓ.ರಂಗಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಇದುವರೆಗೂ ಒಟ್ಟು 16 ಅಭ್ಯರ್ಥಿಗಳಿಂದ 19 ನಾಮಪತ್ರಗಳು ಸಲ್ಲಿಕೆಯಾಗಿವೆ.
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಸುಧಾಕರ್.ಡಿ 2,
ಭಾರತೀಯ ಜನತಾ ಪಕ್ಷದಿಂದ ಕೆ.ಪೂರ್ಣಿಮಾ 1,
ಜ್ಯಾತ್ಯಾತೀತ ಜನತಾ ದಳದಿಂದ ಎಂ.ರವೀಂದ್ರಪ್ಪ 2,
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಹೆಚ್.ಮಹೇಶ್ 2,
ಆಮ್ ಆದ್ಮಿ ಪಕ್ಷದಿಂದ ಕೆ.ಟಿ.ತಿಪ್ಪೇಸ್ವಾಮಿ 2 ಹಾಗೂ ಶ್ರೀದೇವಿ 1,
ಉತ್ತಮ ಪ್ರಜಾಕೀಯ ಪಕ್ಷದಿಂದ ಈ.ಪಾತಲಿಂಗಪ್ಪ 1 ಹಾಗೂ ಆರ್.ಧನು 1,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವಿನಯ್.ಎಸ್ 1,
ಬಹುಜನ ಸಮಾಜ ಪಾರ್ಟಿಯಿಂದ ಎನ್.ರಂಗಸ್ವಾಮಿ 1,
ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾ ಪಕ್ಷದಿಂದ ಬಿ.ಪುಟ್ಟಲಿಂಗಪ್ಪ 1,
ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ಸುಧಾಕರ, ಬಿ.ಶಶಿಕಲಾ, ರಂಗಯ್ಯ.ಎಸ್, ಎನ್.ಓ.ರಂಗಸ್ವಾಮಿ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದಾರೆ.
ಏ.21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.24 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ.