ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಜನ ನಾಯಕರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಹೀಗಾಗಿ ಆದಷ್ಟು ಇಂದೇ ಎಲ್ಲರೂ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಇದರ ನಡುವೆ ಚುನಾವಣೆ ಅನೌನ್ಸ್ ಆಗುತ್ತಿದ್ದಂತೆ. ಪೊಲೀಸರು ಅಲರ್ಟ್ ಆಗಿದ್ದಾರೆ.
ಯಾಕಂದ್ರೆ ಎಲೆಕ್ಷನ್ ನಲ್ಲಿ ಹಣದ ಹೊಳೆ ಹರಿಯುತ್ತದೆ. ಅದನ್ನು ತಪ್ಪಿಸಲು, ದಾಖಲೆಯಿಲ್ಲದ ಹಣ ಸಾಗಾಟವನ್ನು ತಪ್ಪಿಸುವುದು ಸೇರಿದಂತೆ ಎಲ್ಲಾ ರೀತಿಯ ತಪಾಸಣೆ ನಡೆಯಲಿದೆ. ಹೀಗಾಗಿಯೇ ಪೊಲೀಸರು ಎಲ್ಲಾ ಕಡೆ ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಿ ತಪಾಸಣೆ ಮಾಡುತ್ತಿದ್ದಾರೆ. ಹೀಗೆ ತಪಾಸಣೆ ಮಾಡುವಾಗ ಚಿಕ್ಕಮಗಳೂರಿನಲ್ಲಿ ಚಿನ್ನದ ಸಾಮ್ರಾಜ್ಯವೇ ತಗಲಾಕಿಕೊಂಡಿದ್ದು.
ತರೀಕೆರಿ ತಾಲೂಕಿನ ಎಂಸಿ ಹಳ್ಳಿಯ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುವಾಗ ಈ ಚಿನ್ನಾಭರಣ ಸಿಕ್ಕಿದೆ. ಕಂಟೈನರ್ ನಲ್ಲಿ ಬರೋಬ್ಬರಿ 40 ಕೆಜಿ ಚಿನ್ನಾಭರಣವನ್ನು ಸಾಗಿಸಲಾಗಿತ್ತು. ಅದು 23 ಕೋಟಿ ಬೆಲೆ ಬಾಳುವ ಚಿನ್ನಾಭರಣ. ಇನ್ನು ಅಷ್ಟೊ ದೊಡ್ಡ ಮೊತ್ತದ ಚಿನ್ನಾಭರಣಕ್ಕೆ ದಾಖಲೆಗಳು ಸಿಕ್ಕಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.