ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಏ.18) : ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಏಪ್ರಿಲ್ 18 ರಂದು 17 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಜೆ.ಆರ್.ಜೆ. ತಿಳಿಸಿದ್ದಾರೆ.
ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ಮೊಳಕಾಲ್ಮೂರು ನಗರದ ಎಂ.ಓ.ಮಂಜುನಾಥ ಸ್ವಾಮಿ ನಾಯಕ ತಂದೆ ಎಂ ಓಬಯ್ಯ, ಇಂಡಿಯನ್ ನ್ಯಾಷಿನಲ್ ಕಾಂಗ್ರೇಸ್ನಿಂದ ಮೊಳಕಾಲ್ಮೂರು ತಾಲೂಕು ರಾಂಪುರ ಗ್ರಾಮದ ಎನ್.ವೈ.ಗೋಪಾಲಕೃಷ್ಣ ತಂದೆ ಯಲ್ಲಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ರಾಂಪುರ ಗ್ರಾಮದ ಎನ್.ಮಲ್ಲಯ್ಯ ಸ್ವಾಮಿ ಅಲಿಯಾಸ್ ಮಲ್ಲಣ್ಣ ಸ್ವಾಮಿ ತಂದೆ ಎನ್.ರಾಮಣ್ಣ ಹಾಗೂ ಮೊಳಕಾಲ್ಮೂರು ತಾಲೂಕು ಮೇಗಳ ಹಟ್ಟಿ ಗ್ರಾಮದ ಓ.ಗೋವಿಂದ ತಂದೆ ಓಬಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಕೆ.ಸಿ.ವೀರೇಂದ್ರ, ಬಹುಜನ ಸಮಾಜ ಪಾರ್ಟಿಯಿಂದ ಚಳ್ಳಕೆರೆ ಗ್ರಾಮದ ಎನ್.ಪ್ರಕಾಶ್ ತಂದೆ ನಾಗಪ್ಪ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಚಿತ್ರದುರ್ಗ ನಗರದ ಕಾಮ್ರಾನ್ ಅಲಿ ಕೆ.ಎಸ್. ತಂದೆ ಕೆ.ಬಿ.ಸನಾವುಲ್ಲಾ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಚಿತ್ರದುರ್ಗ ನಗರದ ಸೌಭಾಗ್ಯ ಗಂಡ ಎಸ್.ಕೆ.ಬಸವರಾಜನ್ ಹಾಗೂ ಕಸವನಹಳ್ಳಿ ಗ್ರಾಮದ ಜಿ.ಚಿತ್ರಶೇಖರಪ್ಪ ತಂದೆ ಗೋಪಾಲಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಹಿರಿಯೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಹುಜನ ಸಮಾಜವಾದಿ ಪಾರ್ಟಿಯಿಂದ ಹಿರಿಯೂರು ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಎನ್.ರಂಗಸ್ವಾಮಿ ತಂದೆ ನಾಗಪ್ಪ, ಆಮ್ ಆದ್ಮಿ ಪಕ್ಷದಿಂದ ಹಿರಿಯೂರು ತಾಲೂಕಿನ ಬೀರೇನಹಳ್ಳಿಯ ಕೆ.ಟಿ.ತಿಪ್ಪೇಸ್ವಾಮಿ ತಂದೆ ಕೆ.ಎಸ್.ತಿಮ್ಮಯ್ಯ ಹಾಗೂ ಶ್ರೀದೇವಿ.ಎಸ್ ಗಂಡ ಕೆ.ಟಿ.ತಿಪ್ಪೇಸ್ವಾಮಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಬಿ.ಪುಟ್ಟಲಿಂಗಪ್ಪ ತಂದೆ ಬೈಲಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಹೊಸದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಹೊಸದುರ್ಗ ಪಟ್ಟಣದ ಟಿ.ಮಂಜುನಾಥ ತಂದೆ ಎಂ.ತಿಮ್ಮಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಪಕ್ಷದಿಂದ ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ, ಸಂತೇಬೆನ್ನೂರು ಗ್ರಾಮದ ರಾಜು.ಈ ತಂದೆ ಈಶ್ವರಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ಚಿತ್ರದುರ್ಗ ನಗರದ ಜಿ.ಈ.ಉಮಾಪತಿ ತಂದೆ ಈಶ್ವರಪ್ಪ ಹಾಗೂ ಹೊಳಲ್ಕೆರೆ ಪಟ್ಟಣದ ಡಾ.ಎಲ್.ಜಯಸಿಂಹ ತಂದೆ ಡಾ.ಎಸ್.ಕೆ. ಲೋಕನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.