ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು 224 ಕ್ಷೇತ್ರಕ್ಕೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ತಯಾರಿ ನಡೆಸಿತ್ತು. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೇನೋ ದುಪ್ಪಟ್ಟಾಗಿರುತ್ತದೆ. ಆದರೆ ಪಕ್ಷಗಳು ಮಾತ್ರ ಅಳೆದು ತೂಗಿ, ಗೆಲ್ಲುವಂತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಾರೆ. ಈ ವೇಳೆ ಪಲ್ಷಗಳಿಗೆ ಬಂಡಾಯದ ಬಿಸಿಯೂ ಜೋರಾಗಿಯೆರ ಮುಟ್ಟುತ್ತದೆ. ಅದೆಲ್ಲವನ್ನು ಶಮನ ಮಾಡಿ, ಸಮಾಧಾನಗೊಳಿಸಿ, ಫೈನಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ಉದ್ದೇಶವಾವಿರುತ್ತದೆ.
ಈ ಬಾರಿಯ ಚುನಾವಣಾ ರಣಕಣ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಅದರಲ್ಲೂ ಬಿಜೆಪಿ. ಗುಜರಾತ್ ನಲ್ಲಿ ಹೊಸ ಮಾದರಿಯನ್ನು ಅಳವಡಿಸಿಕೊಂಡಿದ್ದ ಕಾರಣಕ್ಕೆ ಸುಲಭವಾಗಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು ಬಿಜೆಪಿ. ಹೀಗಾಗಿ ಕರ್ನಾಟಕದಲ್ಲೂ ಅದೇ ಮಾದರಿಯನ್ನು ಅನುಸರಿಸುತ್ತಿದೆ. ಹಿರಿಯರಿಗೆಲ್ಲಾ ಕೊಕ್ ಕೊಟ್ಟು ಯುವಕರಿಗೆ, ಹೊಸಬರಿಗೆ ಮಣೆ ಹಾಕಿದೆ. ಇದು ಬಂಡಾಯದ ಬೆಂಕಿಯಾಡಲು ಅವಕಾಶ ಮಾಡಿಕೊಟ್ಟಂತಾಗಿದೆ.
ಬಂಡಾಯವೆದ್ದು, ಬೇಸರ ಮಾಡಿಕೊಂಡು ಬಿಜೆಪಿಗೆ ಗುಡ್ ಬೈ ಹೇಳಿದವರ ಲೆಕ್ಕ ಇಲ್ಲಿದೆ ನೋಡಿ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಶಾಸಕ ಬಾಬೂರಾವ್ ಚಿಂಚನಸೂರು, ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ, ನೆಹರೂ ಓಲೇಕಾರ್, ಸೊಗಡು ಶಿವಣ್ಣ, ಎನ್ ಆರ್ ಸಂತೋಷ್, ಫೈಟರ್ ರವಿ, ಚಿಕ್ಕನಗೌಡರ್, ಎ ಬಿ ಮಾಲಕರೆಡ್ಡಿ, ಶಶಿಕಾಂತ್ ನಾಯಕ್, ಮಲ್ಲಿಕಾರ್ಜುನ ಖೂಬಾ, ಪುಟ್ಟಣ್ಣ, ಹೆಚ್ ವಿಶ್ವನಾಥ್, ಆರ್ ಶಂಕರ್, ಎನ್ ವೈ ಗೋಪಾಲಕೃಷ್ಣ, ವಿಶ್ವನಾಥ್ ಪಾಟೀಲ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ,ವಮಹದೇವಪ್ಪ ಯಾದವಾಡ, ಮಂಜುನಾಥ್ ಕುನ್ನೂರು, ಗೂಳಿಹಟ್ಟಿ ಶೇಖರ್ ರಾಜೀನಾಮೆ ನೀಡಿದ್ದಾರೆ.