ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಾಳಯದಲ್ಲಿ ಬ್ಯಾಕ್ ಟು ಬ್ಯಾಕ್ ರಾಜೀನಾಮೆ ನೀಡುತ್ತಿರುವವರ ಸಂಖ್ಯೆ ಜೋರಾಗಿದೆ. ಇವತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ವಿರುದ್ಧ ಕಿಡಿಕಾರಿದ್ದಾರೆ.
ಭಾರತೀಯ ಜನತಾ ಪಕ್ಷ ಒಂದು ರಾಷ್ಟ್ರೀಯ ಪಕ್ಷವಾಗಿದೆ. ಹಳೆ ಬೇರು, ಹೊಸ ಚಿಗುರು ಸೇರಿ ಪಕ್ಷವನ್ನು ಬಲಪಡಿಸಬೇಕಾಗಿದೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಇಬ್ಬರಿಗೂ ಪಕ್ಷ ಅವಕಾಶ ನೀಡಿತ್ತು. ಸವದಿಯನ್ನು ಬಿಜೆಪಿಗೆ ಕರೆತಂದು ಶಾಸಕ, ಸಚಿವರನ್ನಾಗಿ ಮಾಡಿದ್ದೆವು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು ಕೂಡ ಡಿಸಿಎಂ ಮಾಡಿದ್ದೆವು. ಹತ್ತು ತಿಂಗಳ ಹಿಂದೆ ಎಂಎಲ್ಸಿಯಾಗಿ ಮರು ನೇಮಕ ಮಾಡಿದ್ದಾಗ ಇನ್ನೂ ಐದು ವರ್ಷ ಅಧಿಕಾರವಧಿ ಇರುವಾಗಲೇ ಬಿಜೆಪಿ ತೊರೆದಿದ್ದಾರೆ.
ಶೆಟ್ಟರ್ ಅವರನ್ನು ಅಷ್ಟೇ ಶಾಸಕ, ಸಚಿವ, ಸಿಎಂ ಆಗಿ ಮಾಡಿದೆವು. ಜಗದೀಶ್ ಶೆಟ್ಟರ್ ಗೆ ನಾನು ಮತ್ತೆ ಅನಂತ್ ಕುಮಾರ್ ಕಾವಲಾಗಿದ್ದೆವು. ನನ್ನ ಜೊತೆಗೆ ಹೆಜ್ಜೆ ಹಾಕುವ ಜವಬ್ದಾರಿ ಜಗದೀಶ್ ಶೆಟ್ಟರ್ ಗೆ ಇತ್ತು. ಪಕ್ಷದ ಸಹಕಾರ ಇಲ್ಲ ಅಂದ್ರೆ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಏನು ಮಾಡಿದ್ದೆವು..? ಎಂದು ಪ್ರಶ್ನಿಸಿದ್ದಾರೆ.