Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರದೆ ಇದ್ದರೆ ಮಗಳನ್ನು ಮನೆಗೆ ಕಳುಹಿಸಲ್ಲ : ರಾಯಚೂರಿನಲ್ಲಿ ಅಳಿಯನಿಗೆ ಮಾವನ ಡಿಮ್ಯಾಂಡ್..!

Facebook
Twitter
Telegram
WhatsApp

ರಾಯಚೂರು: ಈ ಸಾಲನ್ನು ನೋಡೊದ್ರೆ ರಾಜಕೀಯ ಅನ್ನೋದು ಎಲ್ಲಿಗೆ ಬಂದು ನಿಂತಿದೆ ಎಂಬುದು ತಿಳಿಯಲಿದೆ. ಸದ್ಯ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳು ಹಪಹಪಿಸುತ್ತಿವೆ. ಅದರ ಜೊತೆಗೆ ಜನ ಕೂಡ ತಮಗಿಷ್ಟವಾದ ಪಕ್ಷಕ್ಕೆ ಪ್ರಚಾರ ಮಾಡುವಲ್ಲಿ ಜನ ಕೂಡ ನಿರತರಾಗಿದ್ದಾರೆ. ಈ ಪ್ರಚಾರದ ಅಬ್ಬರದಲ್ಲಿ ವಿಚಿತ್ರ ಘಟನೆ ಒಂದು ನಡೆದಿದೆ.

ರಾಯಚೂರಿನಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ. ರಾಜಕೀಯ ಈಗ ವೈಯಕ್ತಿಕ ಆಗಿರುವ ಸಂಗತಿ ಜಿಲ್ಲೆಯ ಹುಣಸಗಿ ತಾಲೂಕಿನ ಸೊನ್ನಾಪುರ ತಾಂಡಾದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪರಶುರಾಮ್ ಚೌಹ್ಹಾಣ್ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೆ ಮಾವ ಚಂದ್ರು ಬಿಜೆಪಿಯಲ್ಲಿದ್ದಾರೆ. ಪರಶುರಾಮ್ ಪತ್ನಿ ಹೆರಿಗೆಗೆ ಎಂದು ತವರಿಗೆ ಹೋಗಿದ್ದರು. ಈಗ ಮಾವ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.

ಮಗಳನ್ನು ಮನೆಗೆ ಕಳುಹಿಸುವಂತೆ ಅಳಿಯ, ಮಾವನಿಗೆ ಕೇಳಿದ್ದಾರೆ. ಆದರೆ ಈ ವೇಳೆ ಮಾವ ಸ್ಪೆಷಲ್ ಡಿಮ್ಯಾಂಡ್ ಇಟ್ಟಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರೆ ಮಾತ್ರ ಮಗಳನ್ನು ಕಳುಹಿಸುವುದು ಎಂದು ಹೇಳಿದ್ದಾರೆ. ಆದರೆ ಅಳಿಯ ಮಾವನ ಡಿಮ್ಯಾಂಡ್ ಗೆ ಕ್ಯಾರೆ ಎಂದಿಲ್ಲ. ಈಗ ಮಾವ, ತನ್ನ ಮಗಳು, ಮಗುವನ್ನು ಕಳುಹಿಸುತ್ತಾರಾ ಇಲ್ಲವಾ ಎಂಬುದನ್ನು ನೋಡಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಂವಿಧಾನದ ಆಶಯಗಳು ಭಾವನಾತ್ಮಕ ಆಚರಣೆಗೆ ಸೀಮಿತವಾಗದಿರಲಿ: ಡಾ. ಎಂ. ಎಸ್. ಶೇಖರ್

  ಶಂಕರಘಟ್ಟ, ನ. 26: ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಂವಿಧಾನದ ಆಶಯಗಳನ್ನು ಭಾವನಾತ್ಮಕ ಮಾತುಗಳಿಗೆ ಸೀಮಿತಗೊಳಿಸದೆ, ಬದ್ಧತೆಯೊಂದಿಗೆ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯನ್ನು ನಾವೆಲ್ಲರೂ ನಿರ್ವಹಿಸಬೇಕೆಂದು ಸಾಹಿತಿ ಮತ್ತು ಚಿಂತಕ ಡಾ. ಎಂ. ಎಸ್. ಶೇಖರ್

ಅಕ್ಕನೇನಿ ಕುಟುಂಬದಲ್ಲಿ ಎರಡೆರಡು ಸಂಭ್ರಮ : ಅಖಿಲ್ ಗೆ 2ನೇ ಎಂಗೇಜ್ಮೆಂಟ್.. ನಾಗಚೈತನ್ಯಗೆ 2ನೇ ಮದುವೆ..!

ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜು‌ನ ಮನೆಯಲ್ಲಿ ಈಗಾಗಲೇ ಮದುವೆ ಸಂಭ್ರಮ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ನಾಗಚೈತನ್ಯ ಹಾಗೂ ಶೋಭಿತಾ ಎಂಗೇಜ್ಮೆಂಟ್ ಆಗಿದ್ದು, ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಶೋಭಿತಾ ಮನೆಯಲ್ಲಿ

ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಬಿರುಕು : ಅಂಥದ್ದೇನಾಯ್ತು..?

ಬಾಗಲಕೋಟೆ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಮೂರುವರೆ ವರ್ಷದಿಂದ ನಡೆಯುತ್ತಿದೆ. ಸರ್ಕಾರಕ್ಕೆ ಸಾಕಷ್ಟು ಬಾರಿ ಕೊನೆಯ ಎಚ್ಚರಿಕೆಯನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ

error: Content is protected !!