ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ ಅನೌನ್ಸ್ ಆದ ಕೂಡಲೇ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡುತ್ತಿವೆ. ಅದರ ಜೊತೆಗೆ ಬಂಡಾಯದ ಭೀತಿ ಎದುರಾಗಿದೆ. ಈಗ ಕಾಂಗ್ರೆಸ್ ನಲ್ಲೂ ನಾಯಕರು ಬಂಡಾಯದ ಬಿಸಿ ಎದುರಿಸುತ್ತಿದ್ದಾರೆ.
ಬೆಳಗಾವಿಯಲ್ಲೂ ಬಂಡಾಯದ ಬಿಸಿ ಎದುರಾಗಿದೆ. ಜಿಲ್ಲೆಯ ಮೂರು ಕ್ಷೇತ್ರದಲ್ಲೂ ಬಂಡಾಯವೆದ್ದಿದ್ದಾರೆ. ಗೋಕಾಕ್, ಸವದತ್ತಿ , ಕಿತ್ತೂರು ಕ್ಷೇತ್ರದಲ್ಲಿ ಬಂಡಾಯವೆದ್ದಿದ್ದಾರೆ. ಟಿಕೆಟ್ ಸಿಗದ ಬೇಸರಕ್ಕೆ ಪಕ್ಷದ ವಿರುದ್ಧವೇ ನಿಲ್ಲುವ ಪ್ಲ್ಯಾನ್ ಮಾಡಿದ್ದಾರೆ.
ಸದ್ಯ ಬಂಡಾಯವೆದ್ದಿರುವ ನಾಯಕರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ್ ಪೂಜಾರಿ ನಿರೀಕ್ಚೆ ಇಟ್ಟುಕೊಂಡಿದ್ದರು. ಆದರೆ ಮಹಾಂತೇಶ ಕಡಾಡಿಗೆ ಟಿಕೆಟ್ ಸಿಕ್ಕಿದೆ. ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಸೌರಭ್ ಚೋಪ್ರಾ, ದ್ಯಾಮನಗೌಡರ್ ಆಕಾಂಕ್ಷಿಯಾಗಿದ್ದರು. ಆದರೆ ವಿಶ್ವಾಸ ವೈದ್ಯನಿಗೆ ಸಿಕ್ಕಿದೆ. ಕಿತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಬಾಬಾ ಸಾಹೇಬ್ ಪಾಟೀಲ್ ಗೆ ಸಿಕ್ಕಿದೆ. ಹಬ್ಬೀಬ್ ಶಿಲ್ಲೇದಾರ್ ಬಂಡಾಯವೆದ್ದಿದ್ದಾರೆ.