ಮಾಜಿ ಟೀಂ ಇಂಡಿಯಾ ಆಟಗಾರ ಸುಧೀರ್ ನಾಯ್ಕ್ ನಿಧನರಾಗಿದ್ದಾರೆ. ಸುಧೀರ್ ನಿಧನಕ್ಕೆ ಕ್ರಿಕೆಟ್ ಬಳಗ ಕಂಬನಿ ಮಿಡಿದಿದೆ. ಕಳೆದ ತಿಂಗಳು ಬಾತ್ ರೂಮಿನಲ್ಲಿ ಕಾಲು ಜಾರಿ ಬಿದ್ದಿದ್ದರು. ತಲೆಗೆ ಗಂಭೀರ ಗಾಯವಾಗಿತ್ತು. ಅಂದು ಕೋಮಾಗೆ ಹೋದವರು ಇಂದು ನಿಧನರಾಗಿದ್ದಾರೆ.
1971ರ ಸೀಸನ್ ನಲ್ಲಿ ಗವಾಸ್ಕರ್, ಅಜಿತ್ ವಾಡೇಕರ್, ದಿಲೀಪ್ ಸರ್ದೇಸಾಯಿ ಮತ್ತು ಮಂಕಡ್ ಅವರಂತಹ ಸ್ಟಾರ್ ಗಳು ಲಭ್ಯವಿಲ್ಲದೆ ಇದ್ದಾಗ ರಣಜಿ ರಾಜಾ ಮುಂಬೈಯನ್ನು ಚಾಂಪಿಯನ್ ಮಾಡಿದ ಕೀರ್ತಿ ಸುಧೀರ್ ನಾಯಕ್ ಅವರಿಗೆ ಸಲ್ಲುತ್ತದೆ. ಟೀಂ ಇಂಡಿಯಾ ಪರ ಮೂರು ಟೆಸ್ಟ್ ಹಾಗೂ ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಸುಧೀರ್ ಬಲಗೈ ಆರಂಭಿಕ ಬ್ಯಾಟ್ಸಮನ್. ಪ್ರಥಮ ದರ್ಜೆ ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ ಬ್ಯಾಟಿಂಗ್ ರೇಟಿಂಗ್ ಹೊಂದಿದ್ದಾರೆ. ಆದರೂ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.
ಸುಧೀರ್ ಹಲವು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ. ವಾಂಖೆಡೆ ಮೈದಾನದ ಮೇಲ್ವಿಚಾರಕರಾಗಿಯೂ ಕೆಲಸ ಮಾಡಿದ್ದಾರೆ.