ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಏಪ್ರಿಲ್.03) : ಚಿತ್ರದುರ್ಗ ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಮುಂಗಾರು ಹಂಗಾಮಿನ ಬಿ ಟಿ ಹತ್ತಿ ಬಿತ್ತನೆ ಕಾಲ ಪ್ರಾರಂಭವಾಗಿದ್ದು, ಹತ್ತಿ ಬೆಳೆ ಇಚ್ಛಿಸುವ ರೈತರು ಮಾರುಕಟ್ಟೆಯಲ್ಲಿ ಲಭ್ಯವಿರುವ Long Staple ಬಿ ಟಿ ಹತ್ತಿ ಬಿತ್ತನೆ ಬೀಜ ಹಾಗೂ Medium Staple ಬಿ ಟಿ ಹತ್ತಿ ಬಿತ್ತನೆ ಬೀಜಗಳನ್ನು ಬಳಸಬೇಕು ಎಂದು ಕೃಷಿ ಇಲಾಖೆ ವಿನಂತಿಸಿದೆ.
ಮಾರುಕಟ್ಟೆ ದರ ಹಾಗೂ ಇಳುವರಿಗೆ ಹೋಲಿಸಿದಾಗ Long Staple ಮತ್ತು Medium Staple ಹತ್ತಿಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದ್ದರಿಂದ ರೈತರು ಮಾರುಕಟ್ಟೆಯಲ್ಲಿ ದೊರಕುವ Medium Staple ಬಿ ಟಿ ಹತ್ತಿ ಬಿತ್ತನೆ ಬೀಜಗಳನ್ನು ಬಳಸುವಂತೆ ರೈತ ಬಾಂಧವರಿಗೆ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ.