ನವದೆಹಲಿ: ರಾಹುಲ್ ಗಾಂಧಿ ಭಾಷಣ ಮಾಡುವಾಗ ಮೋದಿ ಸಮುದಾಯದ ಬಗ್ಗೆ ಮಾತನಾಡಿದ್ದರು. ಈ ಸಂಬಂಧ ಸೂರತ್ ಕೋರ್ಟ್ ರಾಹುಲ್ ಗಾಂಧಿಯನ್ನು ಶಿಕ್ಷೆಗೆ ಗುರಿ ಮಾಡಿತ್ತು. ಶಿಕ್ಷೆಯಿಂದಾಗಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು. ಇದೀಗ ಈ ಸಂಬಂಧ ಮೇಲ್ಮನವಿ ಸಲ್ಲಿಸಲು ರಾಹುಲ್ ಗಾಂಧಿ ಸನ್ನದ್ಧರಾಗಿದ್ದಾರೆ.
ಮೇಲ್ಮನವಿ ಸಲ್ಲಿಸಲು ರಾಹುಲ್ ಗಾಂಧಿ ಅವರು ಸೂರತ್ ಗೆ ಪ್ರಯಾಣ ಬೆಳೆಸಿದ್ದಾರೆ. ರಾಹುಲ್ ಗಾಂಧಿಗೆ ಪ್ರಿಯಾಂಕ ಗಾಂಧಿ ಕೂಡ ಸಾಥ್ ನೀಡಿದ್ದಾರೆ. ಇಂದು ಜಿಲ್ಲಾ ಸತ್ರಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಈ ಹಿಂದೆ ಶಿಕ್ಷೆಯನ್ನು ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಲಿದ್ದಾರೆ.
ರಾಹುಲ್ ಗಾಂಧಿ ಇಂದು ಮೇಲ್ಮನವಿ ಸಲ್ಲಿಸುವ ವೇಳೆ ಕಾಂಗ್ರೆಸ್ ನ ಮೂರು ರಾಜ್ಯಗಳ ಸಿಎಂ ಬೆಂಬಲ ನೀಡಲಿದ್ದಾರೆ. ಜೊತೆಗೆ ನಿಲ್ಲಲಿದ್ದಾರೆ. ಹಿಮಾಚಲಪ್ರದೇಶದ ಸುಖವಿಂದರ್ ಸಿಂಗ್ ಸುಖು, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತಿಸ್ ಘಡ ಸಿಎಂ ಭೂಪೇಶ್ ಭಘೇಲಾ ಜೊತೆಯಾಗಲಿದ್ದಾರೆ.
ಇನ್ನು ರಾಹುಲ್ ಗಾಂಧಿ ಕೋರ್ಟ್ ಗೆ ಹೋಗುತ್ತಿರುವುದನ್ನು ಬಿಜೆಪಿ ವ್ಯಂಗ್ಯವಾಡಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಸಿಎಂಗಳ ಜೊತೆಗೆ ಸೂರತ್ ಗೆ ರಾಹುಲ್ ಗಾಂಧಿ ಪಯಣ ಬಾಲಿಶವಾಗಿದೆ. ಅಪರಾಧಿ ಖುದ್ದಾಗಿ ಮೇಲನವಿ ಸಲ್ಲಿಸುವ ಅಗತ್ಯವಿಲ್ಲ. ರಾಹುಲ್ ಗಾಂಧಿ ಆಪ್ತರ ಜೊತೆಗೆ ಕೋರ್ಟ್ ಗೆ ಹೋಗುತ್ತಿರುವುದು ಡ್ರಾಮಾ ಎಂದಿದ್ದಾರೆ.