ಮಕ್ಕಳು ಮೊದಲು ಓದು ಮುಗಿಸಲಿ, ಭವಿಷ್ಯ ಕಟ್ಟಿಕೊಳ್ಳಲಿ. ಮೊದಲೇ ಪಿಯುಸಿ, ಡಿಗ್ರಿ ವಯಸ್ಸು ಪ್ರೀತಿ, ಪ್ರೇಮದ ಕಡೆಗೆ ಮನಸ್ಸನ್ನು ಹರಿಯ ಬಿಡುತ್ತೆ ಅಂತ ಅಪ್ಪ ಅಮ್ಮ ಆದಷ್ಟು ಮಕ್ಕಳ ಮನಸ್ಸನ್ನು ಓದಿನ ಕಡೆಗೆ ನೀಡುವಂತೆ ಹೇಳುತ್ತಾ ಇರುತ್ತಾರೆ. ಕಾಲೇಜುಗಳಲ್ಲೂ ಪ್ರೀತಿ – ಪ್ರೇಮಕ್ಕೆಲ್ಲಾ ಅವಕಾಶ ಸಿಗಲ್ಲ. ಅದಕ್ಕೆಂದೆ ಕಾಲೇಜು ವಿದ್ಯಾರ್ಥಿಗಳು ಕದ್ದು ಮುಚ್ಚಿ ಓಡಾಡ್ತಾರೆ. ಆದ್ರೆ ಅಲ್ಲೊಂದು ಕಾಲೇಜಲ್ಲಿ ಪ್ರೀತಿ ಮಾಡುವುದಕ್ಕೇನೆ ಒಂದು ವಾರ ರಜೆ ನೀಡ್ತಾರೆ ಅಂದ್ರೆ ನಂಬ್ತಿರಾ..?.
ನೀವೂ ಇದನ್ನು ನಂಬಲೇ ಬೇಕು. ಆ ಕಾಲೇಜು ಇರುವುದು ಚೀನಾದಲ್ಲಿ. ಚೀನಾ ದೇಶದ 9 ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆಯಂತೆ. ಏಪ್ರಿಲ್ 1 ರಿಂದ 9 ರ ತನಕ ಲವ್ ಮಾಡುವುದಕ್ಕೆ ರಜೆ ನೀಡಲಾಗಿದೆ. ‘ಫಾಲ್ ಇನ್ ಲವ್’ ಲೀವ್ ನೀಡಲಾಗಿದೆ.
ಸರ್ಕಾರಕ್ಕೆ ಈ ಐಡಿಯಾ ನೀಡಿರುವುದೇ ಈ ಒಂಭತ್ತು ಕಾಲೇಜಂತೆ. ಚೀನಾದಲ್ಲಿ ಗಣನೀಯವಾಗಿ ಜನಸಂಖ್ಯೆ ಕುಸಿಯುತ್ತಾ ಇದೆ. ಇದು ಜಿನ್ಪಿಂಗ್ ಸರ್ಕಾರಕ್ಕೆ ತಲೆನೋವಾಗಿದೆ. ಅದೇ ಕಾರಣಕ್ಕೂ ಹಲವರು ಹಲವು ರೀತಿಯ ಐಡಿಯಾಗಳನ್ನು ನೀಡಿದ್ದಾರಂತೆ. ಅದರಲ್ಲಿ ಕಾಲೇಜು ಒಂದು ವಾರಗಳ ಪ್ರೀತಿ ಮಾಡುವುದಕ್ಕೆ ರಜೆ ನೀಡುವ ಐಡಿಯಾವೂ ಒಂದು. ಚೀನಾದಲ್ಲಿ ಯುವಕರು ಪ್ರೀತಿಯಲ್ಲಿ ಬೀಳಲು ಹಾಗೂ ಬೀಳಿಸಿಕೊಳ್ಳಲು ಕಾಲೇಜುಗಳಲ್ಲಿಯೇ ಸುವರ್ಣವಕಾಶ ಸಿಕ್ಕಿದೆ.